ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕೇಂದ್ರ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ಶಿವಮೊಗ್ಗದ ನೆಹರೂ ಯುವ ಕೇಂದ್ರ ವತಿಯಿಂದ 2022-23 ನೇ ಸಾಲಿನ ಯುವ ನಾಯಕತ್ವ ಮತ್ತು ಸಮುದಾಯಗಳ ಅಭಿವೃದ್ದಿ ತರಬೇತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.
READ | ಕೇಂದ್ರ ಕಾರಾಗೃಹದಲ್ಲಿ ಮೂರು ಹುದ್ದೆಗಳು ಮಂಜೂರು, ಡಿ.21ರಂದು ನೇರ ಸಂದರ್ಶನ
ಪಾಲ್ಗೊಳ್ಳಲು ಗೂಗಲ್ ಲಿಂಕ್ ಬಳಸಿ
ಈ ಕಾರ್ಯಕ್ರಮದಲ್ಲಿ ಜಿಲ್ಲೆಯ 40 ಯುವಜನರಿಗೆ 3 ದಿನಗಳ ಕಾಲ ವಸತಿ ಸಹಿತ ತರಬೇತಿ ನೀಡಲಾಗುವುದು. 15 ರಿಂದ 29 ವಯೋಮಿತಿಯೊಳಗಿನ ಯುವಜನತೆ ಪಾಲ್ಗೊಳ್ಳಬಹುದಾಗಿದೆ. ಗೂಗಲ್ ಲಿಂಕ್ me-qr.com/QRhfBzf ಅಥವಾ ಮೊಬೈಲ್ ಸಂಖ್ಯೆ 9961332968 ಗೆ ಕರೆ ಮಾಡಿ ನೋಂದಣಿ ಮಾಡಿಕೊಳ್ಳಬಹುದು. ನೋಂದಣಿ ಮಾಡಿಕೊಳ್ಳಲು ಡಿಸೆಂಬರ್ 22 ಕಡೆಯ ದಿನವಾಗಿದೆ.
ಏನೇನು ತರಬೇತಿ ಲಭ್ಯ?
ತರಬೇತಿಯಲ್ಲಿ ಯುವಜನತೆಯಲ್ಲಿ ವ್ಯಕ್ತಿತ್ವ ವಿಕಸನ, ಮೂಲಭೂತ ಜೀವನ ಕೌಶಲ್ಯಗಳು, ನಾಯಕತ್ವದ ಗುಣ, ಸ್ವಯಂ ಸೇವೆ, ಸಾಮಾಜಿಕ ಬದ್ಧತೆ, ದೇಶಭಕ್ತಿಯ ಮೌಲ್ಯಗಳು ಮತ್ತು ವೃತ್ತಿ ಯೋಜನೆ ವಿಷಯಗಳ ಬಗ್ಗೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ನೀಡಲಾಗುವುದು ಎಂದು ಜಿಲ್ಲಾ ಯುವ ಅಧಿಕಾರಿ ಉಲ್ಲಾಸ್ ತಿಳಿಸಿದ್ದಾರೆ.
https://suddikanaja.com/2022/12/16/shivamogga-police-notice-to-install-cctv-camaras-within-15-days/