ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಸಂಚಾರ ದಟ್ಟಣೆ ತಡೆಯುವ ಉದ್ದೇಶದಿಂದ ಶಿವಮೊಗ್ಗ ಪೊಲೀಸರು ಟ್ರಾಫಿಕ್ ನಿಯಮಗಳಲ್ಲಿ ಭಾರಿ ಬದಲಾವಣೆ ತರಲು ಮುಂದಾಗಿದ್ದು, ಹೊಸ ವರ್ಷಕ್ಕೆ 5 ರಸ್ತೆಗಳಲ್ಲಿ ಭಾರೀ ವಾಹನ ಸಂಚಾರದ ಮೇಲೆ ನಿರ್ಬಂಧ ಹೇರಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸುಗಮ ಸಂಚಾರ ಸಂಬಂಧ ಚರ್ಚಿಸಲು ಮಂಗಳವಾರ ಸಂಜೆ ಆಯೋಜಿಸಿದ್ದ ಸಭೆಯಲ್ಲಿ ಎಸ್.ಪಿ ಜಿ.ಕೆ.ಮಿಥುನ್ ಕುಮಾರ್ ಪ್ರಕಟಿಸಿದರು.
ಈ ವೇಳೆ ಮಾತನಾಡಿದ ಮಿಥುನ್ ಕುಮಾರ್, ಭಾರೀ ವಾಹನಗಳ ಸಂಚಾರ ನಿಷೇಧಿಸಲು ಉದ್ದೇಶಿರುವ ರಸ್ತೆಗಳ ಬಗ್ಗೆ ಯಾವುದೇ ಆಕ್ಷೇಪಗಳಿದ್ದರೂ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.
READ | ಡಿಸಿಸಿ ಬ್ಯಾಂಕಿನಿಂದ ಯಶಸ್ವಿನಿ ಯೋಜನೆ, ಕೂಡಲೇ ಹೆಸರು ನೋಂದಾಯಿಸಿ
ಯಾವ್ಯಾವ ರಸ್ತೆಗಳಲ್ಲಿ ಹೆವಿ ವೆಹಿಕಲ್ ನಿಷೇಧ?
- ತುಂಗಾ ಬ್ರಿಡ್ಜ್- ಕೋಟೆ ಭೀಮೇಶ್ವರ ದೇವಸ್ಥಾನ- ರಾಮಣ್ಣ ಶ್ರೇಷ್ಠಿ- ಬೈಪಾಸ್.
- ಸಂದೇಶ ಮೋಟರ್ಸ್- ಎನ್.ಟಿ.ರಸ್ತೆ- ಸಾಗರ ರಸ್ತೆ- ಎಪಿಎಂಸಿ
- ಸರ್ಕ್ಯೂಟ್ ಹೌಸ್- 60 ಫೀಟ್ ರಸ್ತೆ- ಪೊಲೀಸ್ ಚೌಕಿ
- ಮಹಾವೀರ ಸರ್ಕಲ್- ಕೆಇಬಿ ಸರ್ಕಲ್
- ಮಹಾವೀರ ಸರ್ಕಲ್- ಸವಳಂಗ ರಸ್ತೆ- ಉಷಾ ನರ್ಸಿಂಗ್ ಸರ್ಕಲ್
ನಗರ ವ್ಯಾಪ್ತಿಯಲ್ಲಿ ಈ ಮುಂಚೆಯೇ ನೋಟಿಫಿಕೇಶನ್ ಮಾಡಲಾಗಿತ್ತು. ಅದರನ್ವಯ 9 ರಸ್ತೆಗಳಲ್ಲಿ ಬೆಳಗ್ಗೆ 9 ರಿಂದ ರಾತ್ರಿ 9ರವರೆಗೆ ವಾಹನ ಸಂಚಾರಕ್ಕೆ ನಿಲುಗಡೆ ಮಾಡಲಾಗಿತ್ತು. ಈಗ ಉದ್ದೇಶಿತ ಅಧಿಸೂಚನೆಯಲ್ಲಿ ಎಲ್ಲದಕ್ಕೂ ಬೆಳಗ್ಗೆ 8 ರಿಂದ ರಾತ್ರಿ 8ರ ವರೆಗೆ ಅವಕಾಶ ಮಾಡಲಾಗಿದೆ ಎಂದು ಎಸ್ಪಿ ತಿಳಿಸಿದರು.
ದುರ್ಗಿಗುಡಿ ರಸ್ತೆಯಲ್ಲಿ ಈಗಾಗಲೇ ಒನ್ ವೇ ಇದೆ. ಆದರೆ, ಅಲ್ಲಿ ನಿಯಮ ಕಟ್ಟುನಿಟ್ಟಿನಿಂದ ಪಾಲಿಸುತ್ತಿಲ್ಲ ಎಂಬ ಬಗ್ಗೆ ಜನರು ಆರೋಪಿಸಿದ್ದು, ಈ ರಸ್ತೆಯಲ್ಲಿ ಸಿಬ್ಬಂದಿಯನ್ನು ನಿಯೋಜಿಸಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ, ಡಿವೈಎಸ್ಪಿ ಬಾಲರಾಜು ಉಪಸ್ಥಿತರಿದ್ದರು.
https://suddikanaja.com/2022/12/27/1-52-lakh-applications-were-received-for-new-inclusion-in-the-voter-list-at-shimoga/