ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ದ್ವಿತೀಯ ದರ್ಜೆ ಸಹಾಯಕರು ‘ಸಿʼ ವೃಂದದ ಹುದ್ದೆಗೆ ನೇಮಕಾತಿ ಅಧಿಸೂಚನೆ ತಿದ್ದುಪಡಿ ತರಲಾಗಿದೆ ಎಂದು ಶಿವಮೊಗ್ಗದ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
READ | ಸ್ವಯಂ ಉದ್ಯೋಗಕ್ಕೆ ಎಸಿ, ಫ್ರಿಡ್ಜ್ ತರಬೇತಿ ಶಿಬಿರ, ಕೂಡಲೇ ಅರ್ಜಿ ಸಲ್ಲಿಸಿ
ಏನು ತಿದ್ದುಪಡಿ ಮಾಡಲಾಗಿದೆ?
ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ದ್ವಿತೀಯ ದರ್ಜೆ ಸಹಾಯಕರು ‘ಸಿʼ ವೃಂದದ ಹುದ್ದೆಗೆ ನೇಮಕಾತಿ ಅಧಿಸೂಚನೆ ಸಂಖ್ಯೆ ಸೈಕಪುಇ/ ಸಿಬ್ಬಂದಿ / 134/ ಗ್ರೂಪ್ ಸಇ /2022 ಹಾಗೂ ಕರ್ನಾಟಕ ರಾಜ್ಯ ಪತ್ರ ದಿನಾಂಕ 18-10-2022 ರ ಸಂಚಿಕೆ-210 ರ ಭಾಗ-5 ರಲ್ಲಿ ಪ್ರಕಟಿಸಲಾದ ಪ್ರಕಟಣೆಯ ಕಂಡಿಕೆ 10 ರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ವಸ್ತುನಿಷ್ಠ ಬಹು ಆಯ್ಕೆ ಮಾದರಿಯ ಪ್ರಶ್ನೆ ಪತ್ರಿಕೆ-1 ಸಾಮಾನ್ಯ ಕನ್ನಡ/ಸಾಮಾನ್ಯ ಇಂಗ್ಲಿಷ್/ ಕಂಪ್ಯೂಟರ್ ಜ್ಞಾನ ಹಾಗೂ ಪ್ರಶ್ನೆ ಪತ್ರಿಕೆ-2 ಸಾಮಾನ್ಯ ಜ್ಞಾನ ಎಂದು ಪ್ರಕಟಿಸಲಾಗಿತ್ತು.
ಮೇಲಿನ ಪ್ರಕಟಣೆಗೆ ತಿದ್ದುಪಡಿಯನ್ನು ಅಧಿಸೂಚನೆ ಸಂಖ್ಯೆ ಸೈಕಪುಇ/ ಸಿಬ್ಬಂದಿ/ 134/ ಗ್ರೂಪ್ ಸಿ /2022 ದಿನಾಂಕ: 09-01-2023 ರಡಿಯಲ್ಲಿ ತರಲಾಗಿದ್ದು, ಪ್ರಕಟಣೆಯಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ವಸ್ತುನಿಷ್ಠ ಬಹು ಆಯ್ಕೆ ಮಾದರಿಯ ಪ್ರಶ್ನೆ ಪತ್ರಿಕೆ-1 ಸಾಮಾನ್ಯ ಜ್ಞಾನ ಹಾಗೂ ಪ್ರಶ್ನೆ ಪತ್ರಿಕೆ-2 ಸಾಮಾನ್ಯ ಕನ್ನಡ/ ಸಾಮಾನ್ಯ ಇಂಗ್ಲಿಷ್/ ಕಂಪ್ಯೂಟರ್ ಜ್ಞಾನ ಎಂದು ಓದಿಕೊಳ್ಳತಕ್ಕದ್ದು ಎಂದು ಮೇಲಿನ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈಗಾಗಲೇ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಅರ್ಜಿ ಸಲ್ಲಿಸಿರುವ ಮಾಜಿ ಸೈನಿಕ ಅಭ್ಯರ್ಥಿಗಳು ಸದರಿ ಮಾಹಿತಿಯನ್ನು ಕರ್ನಾಟಕ ರಾಜ್ಯ ಪತ್ರ ದಿನಾಂಕ: 13-01-2023 ರ ಸಂಚಿಕೆ 215 ಭಾಗ-5 ರಲ್ಲಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ಕಚೇರಿಯ ದೂರವಾಣಿ ಸಂಖ್ಯೆ 08182-220925 ಯನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.