Police raid | ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಹಸುಗಳ ರಕ್ಷಣೆ, ಯಾವ ಕಾರಣಕ್ಕೆ ಸಾಗಣೆ?

cattle

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಅಕ್ರಮವಾಗಿ ವಾಹನವೊಂದರಲ್ಲಿ‌ ಸಾಗಿಸುತ್ತಿದ್ದ ಜಾನುವಾರುಗಳನ್ನು ಪೊಲೀಸರು ರಕ್ಷಿಸುವಲ್ಲಿ ಸಫಲರಾಗಿದ್ದು, ಒಬ್ಬ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ದಾವಣಗೆರೆ ಜಿಲ್ಲೆಯ ಚೀಲೂರು ಗ್ರಾಮದ ಅಫ್ರೋಜ್(38) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದ 2 ಎತ್ತು, 3 ಹಸು ಮತ್ತು 2 ಕರುಗಳು ಸೇರಿದಂತೆ ಒಟ್ಟು 7 ಜಾನುವಾರುಗಳನ್ನು ರಕ್ಷಣೆ ಮಾಡಿ ಆರೋಪಿ ವಿರುದ್ಧ The Karnataka Prevention Of Slaughter And Preservation Of Cattle Ordinance – 2020 ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಲಾಗಿದೆ.

READ | ಶಿವಮೊಗ್ಗದಲ್ಲಿ‌ ಎಷ್ಟು ಮತದಾರರಿದ್ದಾರೆ? ಮತಗಟ್ಟೆಗಳೆಷ್ಟು? ಇಲ್ಲಿದೆ ಶಿವಮೊಗ್ಗ ಜಿಲ್ಲೆಯ ಎಲ್ಲ ಕ್ಷೇತ್ರಗಳ ಕಂಪ್ಲೀಟ್ ರಿಪೋರ್ಟ್

ಖಚಿತ ಮಾಹಿತಿ ಹಿನ್ನೆಲೆ ದಾಳಿ
ಕೋಟೆ ಪೊಲೀಸ್ ಠಾಣೆಯ ಪಿಐ ಶಿವಪ್ರಸಾದ್ ರಾವ್ ಅವರಿಗೆ ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪೊಲೀಸ್ ಸಿಬ್ಬಂದಿಯೊಂದಿಗೆ ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್ ನಲ್ಲಿ ವಾಹನಗಳನ್ನು ತಡೆದು ತಪಾಸಣೆ ಮಾಡುತ್ತಿದ್ದಾಗ ಅಲ್ಲಿಗೆ ಬಂದ ವಾಹನವೊಂದರಲ್ಲಿ ಜಾನುವಾರುಗಳನ್ನು ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿರುವುದು ಕಂಡುಬಂದಿದ್ದು, ವಾಹನದ ಚಾಲಕ ಅಫ್ರೋಜ್ ನನ್ನು ವಿಚಾರಣೆ ನಡೆಸಿದಾಗ ಜಾನುವಾರುಗಳನ್ನು ಕಟಾವು ಮಾಡಿ ಮಾಂಸ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿರುವುದು ತಿಳಿದುಬಂದಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

Cattle rescue | ಮಾಂಸ ಮಾರಾಟಕ್ಕೆಂದು ತಂದಿದ್ದ ಜಾನುವಾರುಗಳು ವಶಕ್ಕೆ, 2 ಪ್ರತ್ಯೇಕ ಕೇಸ್ ದಾಖಲು

error: Content is protected !!