Money demand | ಭದ್ರಾವತಿ ಸಿಡಿಪಿಓಗೆ ₹1.20‌ ಲಕ್ಷ ಹಣ ನೀಡುವಂತೆ ಧಮ್ಕಿ, ಕಾರಣವೇನು?

online fraud cyber crime

 

 

ಸುದ್ದಿ ಕಣಜ.ಕಾಂ ಭದ್ರಾವತಿ
BHADRAVATHI: ಭದ್ರಾವತಿ ಶಿಶು ಯೋಜನಾಭಿವೃದ್ಧಿ ಅಧಿಕಾರಿ (ಸಿಡಿಪಿಓ) ಅವರಿಗೆ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರೆಂದು ಕರೆ ಮಾಡಿ ₹1.20 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿರುವುದಾಗಿ ಆರೋಪಿಸಿ ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭದ್ರಾವತಿ ಸಿಡಿಪಿಓ ಸುರೇಶ್ ಅವರು ದೂರು ನೀಡಿದ್ದಾರೆ. ಅಪರಿಚಿತ ವ್ಯಕ್ತಿಯೊಬ್ಬರು ಮೊಬೈಲ್ ಗೆ ಕರೆ ಮಾಡಿ ಅಂಗನವಾಡಿಗೆ ಆಹಾರ ವಿತರಿಸುವ ವಿಚಾರದಲ್ಲಿ ನಿಮ್ಮ ಮೇಲೆ ಪ್ರಕರಣ ದಾಖಲಾಗಿದೆ. ಬೆಂಗಳೂರಿನಿಂದ ವಿಚಾರಣಾಧಿಕಾರಿಗಳು ಬಂದಿದ್ದಾರೆ. ಈ ಸಲ ಜೀವದಾನ ನೀಡುತ್ತೇವೆ. ₹1,20,000 ಗಳನ್ನು ಗೂಗಲ್ ಪೇ ಮಾಡುವಂತೆ ಬೆದರಿಕೆ ಹಾಕಿ ಮಾನಸಿಕ ಕಿರುಕುಳ ನೀಡಿರುತ್ತಾರೆಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ.

error: Content is protected !!