ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಂಕರಘಟ್ಟ ಕುವೆಂಪು ವಿಶ್ವವಿದ್ಯಾಲಯದ 33ನೇ ವಾರ್ಷಿಕ ಘಟಿಕೋತ್ಸವ (Kuvempu university convocation)/ಜೂನ್ 2023 ರಲ್ಲಿ ಜರುಗಲಿದೆ. ಸೆಪ್ಟೆಂಬರ್, ಅಕ್ಟೋಬರ್-2022 ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವ ವಿವಿಧ ರೆಗ್ಯೂಲರ್ ನ ಸ್ನಾತಕ/ಸ್ನಾತಕೋತ್ತರ ಪದವಿ ಡಿಪ್ಲೋಮಾ ಮತ್ತು ಅಕ್ಟೋಬರ್ 2022 ಮಾರ್ಚ್ 2023 ರ ಬಿ.ಇಡಿ ಪದವಿ/ ಏಪ್ರಿಲ್-2022 ರ ರಿಪಿಟರ್ಸ್ ಪದವಿದರರು ಹಾಗೂ ದೂರಶಿಕ್ಷಣದ ಮೂಲಕ ನವೆಂಬರ್-2022 ರಲ್ಲಿ ನಡೆದ ಅಂತಿಮ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವ ಹಾಗೂ ಪಿಎಚ್.ಡಿ ಪದವಿ ಪಡೆದ ಅರ್ಹ ಅಭ್ಯರ್ಥಿಗಳಿಗೆ ಘಟಿಕೋತ್ಸವದಲ್ಲಿ ಪದವಿ ಪ್ರಮಾಣ ಪತ್ರ ಪ್ರದಾನ ಮಾಡಲಾಗುವುದು. ಅರ್ಜಿಯನ್ನು ನೇರವಾಗಿ ವಿಶ್ವವಿದ್ಯಾಲಯದ ವೆಬ್ಸೈಟ್ www.kuvempu.ac.in ಮೂಲಕ ಸಲ್ಲಿಸಬಹುದಾಗಿದೆ.
READ | ಕರ್ನಾಟಕ ಕ್ಯಾಬಿನೆಟ್ ರಚನೆ, ಯಾರಿಗೆ ಯಾವ ಖಾತೆ ಹಂಚಿಕೆ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್
ವಿದ್ಯಾರ್ಥಿಗಳು ನಿಗದಿತ ಅರ್ಜಿ ಶುಲ್ಕ ಮತ್ತು ಇತರೆ ಮಾಹಿತಿಗಳನ್ನು ವಿಶ್ವವಿದ್ಯಾಲಯದ ವೆಬ್ಸೈಟ್ www.kuvempu.ac.in ನಲ್ಲಿ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಚೇರಿ ಸಹಾಯವಾಣಿಗೆ ಕರೆ ಮಾಡಬಹುದಾಗಿದೆ. ಸ್ನಾತಕ ಪದವಿ (ರೆಗ್ಯೂಲರ್)-7022254997, ಸ್ನಾತಕೋತ್ತರ ಪದವಿ/ವೃತ್ತಿಪರ ಕೋರ್ಸ್ (ರೆಗ್ಯೂಲರ್)-7022254993, ದೂರಶಿಕ್ಷಣ-7022255891, ತಾಂತ್ರಿಕ ಸಹಾಯಕ್ಕಾಗಿ 7022255745/ 8183098136 /8183098138 ಅಥವಾ ಈ ಮೇಲ್ ವಿಳಾಸ kusconvo@gmail.com ಮೂಲಕ ಸಂಪರ್ಕಿಸುವಂತೆ ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರು (ಮೌಲ್ಯಮಾಪನ) ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.