Monsoon 2023 | ಈ ವರ್ಷ ನೈರುತ್ಯ ಮುಂಗಾರು ವಿಳಂಬ, ಇನ್ನೂ ಸ್ವಲ್ಪ ದಿನ ಸಹಿಸಿಕೊಳ್ಳಬೇಕಿದೆ ಬಿಸಿಲು, ಕಾರಣವೇನು?

Heavy rain brings 1

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಜ್ಯದಾದ್ಯಂತ ಬಿಸಿಲಿನ (Summer) ಝಳ ಜನರಿಗೆ ಕಾಡುತ್ತಿದೆ. ಅದರಲ್ಲೂ ಅತಿಯಾದ ಆರ್ದ್ರತೆ(Humidity)ಯಿಂದಾಗಿ ಬಿಸಿಲು ಬೆವರಿಳಿಸುತ್ತಿದೆ. ಈ ವಾತಾವರಣವನ್ನು ಇನ್ನಷ್ಟು ದಿನ ಸಹಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಇದಕ್ಕೆ ಕಾರಣ, ಈ ವರ್ಷ ಮುಂಗಾರು ಪ್ರವೇಶ ವಿಳಂಬವಾಗಲಿದೆ.
ಭಾರತೀಯ ಹವಾಮಾನ ಇಲಾಖೆ(India Meteorological Department-ಐಎಂಡಿ)ಯು ಮುನ್ಸೂಚನೆ ನೀಡಿದೆ. ವಾಡಿಕೆಯಂತೆ ದಕ್ಷಿಣ ಭಾರತದ ತುತ್ತತುದಿ ಕೇರಳ ಕರಾವಳಿ ತೀರಕ್ಕೆ ಜೂನ್ 1ರ ವೇಳೆಗೆ ನೈರುತ್ಯ ಮುಂಗಾರು ಪ್ರವೇಶಿಸಬೇಕು. ಈ ಸಲ ನಾಲ್ಕು ದಿನ ವಿಳಂಬವಾಗಿ ಮುಂಗಾರು ಮಾರುತ ಕೇರಳ ಕರಾವಳಿ ಪ್ರವೇಶಿಸಲಿದೆ.

READ | ಮೈಸೂರು ನ್ಯಾಯಾಲಯದಲ್ಲಿ 45 ಹುದ್ದೆಗಳು ಖಾಲಿ, ಯಾರೆಲ್ಲ ಅರ್ಜಿ ಸಲ್ಲಿಸಬಹುದು

ರಾಜ್ಯದಲ್ಲಿ ಜೂನ್ 2ನೇ ವಾರಕ್ಕೆ ಮುಂಗಾರು
ಹವಾಮಾನ ಇಲಾಖೆ ಮುನ್ಸೂಚನೆಯ ಅನ್ವಯ, ಜೂನ್ ಎರಡನೇ ವಾರದಲ್ಲಿ ರಾಜ್ಯಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ. ಕೇರಳ ಮಾರುತಗಳ ಪ್ರವೇಶದೊಂದಿಗೆ ಬಿಸಿಲ ಬೇಗ ಕ್ರಮೇಣವಾಗಿ ಇಳಿಮುಖಗೊಳ್ಳುತ್ತಾ ಸಾಗುತ್ತದೆ. ನಂತರ ಮುಂಗಾರು ಪ್ರವೇಶವಾಗಿ ವರ್ಷಧಾರೆ ಶುರುವಾಗುತ್ತದೆ. ಆದರೆ, ಈ ಸಲ ನೈರುತ್ಯ ಮುಂಗಾರು ಮೇ 22ಕ್ಕೆ ಅಂಡಮಾನ್ ನಿಕೋಬಾರ್ ಪ್ರವೇಶಿಸಲಿದ್ದು, ನಂತರ ತುಸು ದುರ್ಬಲಗೊಂಡು ಜೂನ್ 4ರ ಹೊತ್ತಿಗೆ ಕೇರಳ ಪ್ರವೇಶಿಸಲಿದೆ ಎಂದು ಹೇಳಲಾಗಿದೆ.
ಕೃಷಿ ಚಟುವಟಿಕೆಯಗಳ ಮೇಲೆ ಪ್ರರಿಣಾಮ
ಕಳೆದ ವರ್ಷ ಮೇ 16ರ ಹೊತ್ತಿಗೆ ಮುಂಗಾರು ಅಂಡಮಾನ್ ನಿಕೋಬಾರ್ ಪ್ರವೇಶ ಮಾಡಿತ್ತು. ಈ ಸಲ ವಿಳಂಬವಾಗಿದೆ. ಇದರ ಪರಿಣಾಮ ನೇರವಾಗಿ ಕೃಷಿ ಚಟುವಟಿಕೆಗಳ ಮೇಲಾಗಲಿದೆ. ದೇಶ ಮತ್ತು ರಾಜ್ಯದ ಕೃಷಿಯು ಸಂಪೂರ್ಣವಾಗಿ ಮಳೆಯಾಧಾರಿತವಾಗಿದ್ದು, ಮುಂಗಾರು ವಿಳಂಬವಾಗುವುದರಿಂದ ಬಿತ್ತನೆ ಕಾರ್ಯ ವಿಳಂಬವಾಗಲಿದೆ. ಈಗಾಗಲೇ ರಾಜ್ಯದಲ್ಲಿ ಕೃಷಿ ಇಲಾಖೆ ಗೊಬ್ಬರ ಮತ್ತು ಬೀಜಗಳ ವಿತರಣೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಯಾವುದೇ ಪ್ರಮಾದಗಳಾಗದಂತೆ ದಾಸ್ತಾನು ಸಹ ಮಾಡಲಾಗಿದೆ.

Free admission | ಹೆಣ್ಣು ಮಕ್ಕಳಿಗೆ ಶುಭಸುದ್ದಿ, ಪಿಯುಸಿಗೆ ಉಚಿತ ಪ್ರವೇಶ, ಇಲ್ಲಿದೆ ಪೂರ್ಣ ಮಾಹಿತಿ

error: Content is protected !!