ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ವಿಭಾಗದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಶಿವಮೊಗ್ಗ-ಬೆಂಗಳೂರು ಮಾರ್ಗದಲ್ಲಿ ಪ್ರಸ್ತುತ 4 ಹವಾ ನಿಯಂತ್ರಿತ ವಾಹನಗಳು ಕಾರ್ಯಾಚರಣೆಯಾಗುತ್ತಿದ್ದು, ಪ್ರಯಾಣಿಕರು ಹವಾ ನಿಯಂತ್ರಿತ ವಾಹನಗಳಲ್ಲಿ (KSRTC AC Bus) ಪ್ರಯಾಣಿಸಲು ಅನುಕೂಲವಾಗುವಂತೆ ಪ್ರಯಾಣ ದರವನ್ನು ನಿರ್ಧರಿಸಿ ಬಸ್ಗಳನ್ನು ಚಾಲನೆಗೊಳಿಸಿದೆ.
VIDEO REPORT | ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಫ್ಲೈಟ್ ಲ್ಯಾಂಡ್ ಆಗಿದ್ದೇ ಮೈಪುಳಕವಾಗಿದೆ. ಹೇಗಿತ್ತು ಲ್ಯಾಂಡಿಂಗ್ ದೃಶ್ಯ? ವಿಡಿಯೋ ವೀಕ್ಷಿಸಿ
READ | ಶಿವಮೊಗ್ಗ ವಿಮಾನ ನಿಲ್ದಾಣದ ಬಗ್ಗೆ ರಾಜ್ಯ ಸರ್ಕಾರ ಪ್ರಮುಖ ಘೋಷಣೆ, ಏನದು?
ಎಷ್ಟು ದರ ಪರಿಷ್ಕರಣೆ?
ಈ ವಾಹನಗಳ ಪ್ರಯಾಣ ದರ ವಾರದ ದಿನಗಳಾದ ಸೋಮವಾರದಿಂದ ಗುರುವಾರದವರೆಗೆ ₹550 ಮತ್ತು ವಾರಾಂತ್ಯ ದಿನಗಳಾದ ಶುಕ್ರವಾರದಿಂದ ಭಾನುವಾರದವರೆಗೆ ಪ್ರಯಾಣ ದರ ₹600 ಆಗಿರುತ್ತದೆ.
ಬೆಂಗಳೂರು- ಶಿವಮೊಗ್ಗ ಬಸ್ ವೇಳೆ
ಶಿವಮೊಗ್ಗದಿಂದ ನಿರ್ಗಮನವಾಗುವ ಸಮಯ ಬೆಳಗ್ಗೆ 11, ಮಧ್ಯಾಹ್ನ 1, ರಾತ್ರಿ 10, ರಾತ್ರಿ 11 ಮತ್ತು ಬೆಂಗಳೂರಿನಿಂದ ನಿರ್ಗಮನವಾಗುವ ಸಮಯ ಬೆಳಗ್ಗೆ 10, ಬೆಳಗ್ಗೆ 11, ರಾತ್ರಿ 11, ರಾತ್ರಿ 11.30 ಆಗಿದೆ ಎಂದು ಶಿವಮೊಗ್ಗ ವಿಭಾಗದ ಕ.ರಾ.ರ.ಸಾ.ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.