ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಅಪ್ರಾಪ್ತನಿಗೆ ಆಟೋ ರೈಡ್ ಮಾಡಲು ನೀಡಿದ ತಂದೆಗೆ ₹25 ಸಾವಿರ ದಂಡ ವಿಧಿಸಲಾಗಿದೆ.
ಕ್ಯಾಂಟರ್ ವಾಹನ ಮತ್ತು ಪ್ಯಾಸೇಂಜರ್ ಆಟೋ ನಡುವೆ ಅಪಘಾತವಾಗಿದ್ದು, ಆಟೋವನ್ನು 17 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕನು ಚಲಾಯಿಸಿ ಅಪಘಾತಪಡಿಸಿರುತ್ತಾನೆ. ಆಟೋದ ಮಾಲೀಕನಾದ ಅಗಸವಳ್ಳಿಯ ಸತೀಶ್(44) ಈತನು Emission Test ಮಾಡಿಸದೇ ಅಪ್ರಾಪ್ತ ವಯಸ್ಸಿನ ಬಾಲಕನಿಗೆ ತನ್ನ ಆಟೋ ಚಾಲನೆ ಮಾಡಲು ನೀಡಿರುತ್ತಾನೆ. ಈ ಬಗ್ಗೆ ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
READ | ಎಂಪಿಎಂ ಪುನರಾರಂಭಕ್ಕೆ ರಾಜ್ಯ ಸರ್ಕಾರ ಹೆಜ್ಜೆ, ಬೆಂಗಳೂರಿನಲ್ಲಿ ಪ್ರಮುಖ ಮೀಟಿಂಗ್, ಏನೆಲ್ಲ ಚರ್ಚೆ?
ತನಿಖಾಧಿಕಾರಿ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ಎಎಸ್ಐ ರಾಜೇಶ್ವರಿದೇವಿ ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿರುತ್ತಾರೆ. 4ನೇ ಹೆಚ್ಚುವರಿ ಸಿ.ಜೆ. & ಜೆ.ಎಂ.ಎಫ್.ಸಿ. ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಿ ಆರೋಪಿ ಸತೀಶ್ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಅಪ್ರಾಪ್ತ ವಯಸ್ಸಿನ ಬಾಲಕನಿಗೆ ತನ್ನ ಆಟೋ ಚಾಲನೆ ಮಾಡಲು ನೀಡಿದ್ದಕ್ಕೆ ₹25 ದಂಡ ಮತ್ತು Emission Test ಮಾಡಿಸದೇ ಇರುವುದಕ್ಕೆ ₹1 ಸಾವಿರ ದಂಡ ಸೇರಿ, ಒಟ್ಟು ₹26 ಸಾವಿರ ದಂಡ ವಿಧಿಸಿ ಆದೇಶಿಸಲಾಗಿದೆ.