ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ಎಂ.ಆರ್.ಎಸ್ 110/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ 11 ಕೆ.ವಿ ಲಿಂಕ್ ಲೈನ್ ಕಾಮಗಾರಿ ಇರುವುದರಿಂದ ಈ ಕೆಳಕಂಡ ಪ್ರದೇಶಗಳಲ್ಲಿ ಅ.14ರ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
11 ಕೆ.ವಿ ಎಫ್-5 ಫೀಡರ್: ಎಂ.ಆರ್.ಎಸ್ ವಾಟರ್ ಸಪ್ಲೈ. ಎಂ.ಆರ್.ಎಸ್ ಕಾಲೋನಿ, ಹರಿಗೆ, ಮಲವಗೊಪ್ಪ, ವಡ್ಡಿನಕೊಪ್ಪ, ನಂಜಪ್ಪ ಲೇಔಟ್, ಪ್ರಿಯಾಂಕ ಲೇಔಟ್, 11 ಕೆ.ವಿ ಎಫ್-3 ಫೀಡರ್: ಜ್ಯೋತಿನಗರ, ವಿದ್ಯಾನಗರ, ಕಂಟ್ರಿ ಕ್ಲಬ್ ರಸ್ತೆ, ಚಿಕ್ಕಲ್, ಗುರುಪುರ, ಪುರಲೆ, ಸಿದ್ದೇಶ್ವರ ನಗರ, ಶಾಂತಮ್ಮ ಲೇಔಟ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ (MESCOM) ಪ್ರಕಟಣೆ ತಿಳಿಸಿದೆ.
READ | ನೈರುತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ, ವೇಳಾಪಟ್ಟಿ ಇಲ್ಲಿದೆ
ಶಿವಮೊಗ್ಗ ಜನ ಸಂಪರ್ಕ ಸಭೆ
SHIMOGA: ಶಿವಮೊಗ್ಗ ನಗರ ಮೆಸ್ಕಾಂ ಉಪ ವಿಭಾಗ-2 ವು ಅ.20 ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನ್ಯೂ ಮಂಡ್ಲಿಯಲ್ಲಿರುವ ಮೆಸ್ಕಾಂ ಕಚೇರಿಯಲ್ಲಿ ಜನಸಂಪರ್ಕ ಸಭೆ ನಡೆಯಲಿದೆ. ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ತೀರ್ಥಹಳ್ಳಿ ಜನ ಸಂಪರ್ಕ ಸಭೆ
THIRTHAHALLI: ತೀರ್ಥಹಳ್ಳಿ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಅ. 17 ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಜನ ಸಂಪರ್ಕ ಸಭೆ ನಡೆಯಲಿದ್ದು, ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಈ ಸಭೆಯಲ್ಲಿ ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ. ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ: 9448289508.