Arrest | ನೂರಡಿ‌ ರಸ್ತೆಯಲ್ಲಿ ಮಹಿಳೆಯನ್ನು ಅಡ್ಡಗಟ್ಟಿ ದರೋಡೆ ಮಾಡಿದ ಇಬ್ಬರು ಬಂಧನ, ಇವರ ಮೇಲಿವೆ ರಾಶಿ‌ ರಾಶಿ‌ ಕೇಸ್!

Vinoba nagar

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ವಿನೋಬನಗರದ ನೂರಡಿ‌ ರಸ್ತೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನ ಹತ್ತಿರ ಮಹಿಳೆಯನ್ನು ತಡೆದು ದರೋಡೆ ಮಾಡಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಹಾವೇರಿ ಜಿಲ್ಲೆಯ ಮಾಸೂರು ರಟ್ಟೆಹಳ್ಳಿಯ ಸರ್ವಜ್ಞ ನಗರದ ಆಕಾಶ್ (21)‌‌ ಮತ್ತು ರಾಣೆಬೆನ್ನೂರು‌ ಪಟ್ಟಣದ ಸಿದ್ದೇಶ್ವರ ನಗರ ನಿವಾಸಿ ಪ್ರವೀಣ್ ಹಡಗಲಿ (28) ಎಂಬುವವರನ್ನು ಬಂಧಿಸಲಾಗಿದೆ.
ಆರೋಪಿಗಳ‌ ವಿರುದ್ಧ ಯಾವ ಠಾಣೆಯಲ್ಲಿ‌ ಎಷ್ಟು ಕೇಸ್?
ಆರೋಪಿತರ ವಿರುದ್ಧ ವಿನೋಬನಗರ ಪೊಲೀಸ್ ಠಾಣೆಯ 2 ಸರಗಳ್ಳತನ ಪ್ರಕರಣಗಳು, ತುಂಗಾನಗರ ಪೊಲೀಸ್ ಠಾಣೆಯ 1 ಸರಗಳ್ಳತನ ಪ್ರಕರಣ, ತೀರ್ಥಹಳ್ಳಿ ಪೊಲೀಸ್ ಠಾಣೆಯ 1 ಸರಗಳ್ಳತನ ಪ್ರಕರಣ ಮತ್ತು ಉಡುಪಿ ಟೌನ್ ಪೊಲೀಸ್ ಠಾಣೆಯ 2 ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣ ಸೇರಿ ಒಟ್ಟು 6 ಪ್ರಕರಣಗಳಿವೆ. ಈ ಎಲ್ಲ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಂದಾಜು ₹9,48,600 ಮೌಲ್ಯದ ಒಟ್ಟು 186 ಗ್ರಾಂ ತೂಕದ ಬಂಗಾರದ ಆಭರಣಗಳು ಮತ್ತು ಅಂದಾಜು ₹1 ಲಕ್ಷ ಮೌಲ್ಯದ 2 ದ್ವಿಚ ಕ್ರ ವಾಹನಗಳು ಸೇರಿ ಒಟ್ಟು ₹10,48,600 ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

READ | ಶಿವಮೊಗ್ಗದಿಂದ ಹೈದ್ರಾಬಾದ್, ಗೋವಾ, ತಿರುಪತಿಗೆ ವಾರದಲ್ಲಿ ನಾಲ್ಕು ದಿನ ಮಾತ್ರ ವಿಮಾನ ಹಾರಾಟ, ಹೊಸ ಡೇಟ್ ಘೋಷಿಸಿದ ಸ್ಟಾರ್ ಏರ್, ವೇಳಾಪಟ್ಟಿ, ದರದ ಮಾಹಿತಿ ಇಲ್ಲಿದೆ

ಮಹಿಳೆಯ ವಾಹನ ಅಡ್ಡಗಟ್ಟಿ ದರೋಡೆ
ಅಕ್ಟೋಬರ್‌ ‌11ರಂದು ಸಂಜೆ ಶಿವಮೊಗ್ಗ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಿನೋಬನಗರ 100 ಅಡಿ ರಸ್ತೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಹತ್ತಿರ ವಿನೋಬನಗರದ ನಿವಾಸಿ 55 ವರ್ಷದ ಮಹಿಳೆಯೊಬ್ಬರು ಬೈಕ್ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಬೈಕ್ ನಲ್ಲಿ ಬಂದು ಅವರ ಬೈಕ್ ಗೆ ತಾಗಿಸಿ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿರುತ್ತಾರೆಂದು ದೂರು ನೀಡಲಾಗಿತ್ತು. ಇದರ ಆಧಾರದ ಮೇಲೆ‌ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ತಂಡದ ಕಾರ್ಯಕ್ಕೆ‌ ಶ್ಲಾಘನೆ
ಎಸ್.ಪಿ ಮಿಥುನ್ ಕುಮಾರ್, ಹೆಚ್ಚುವರಿ ಎಸ್.ಪಿ ಅನಿಲ್ ಕುಮಾರ್ ಭೂಮರೆಡ್ಡಿ ಮಾರ್ಗದರ್ಶನದಲ್ಲಿ ಶಿವಮೊಗ್ಗ ಬಿ ಉಪ ವಿಭಾಗದ ಡಿವೈಎಸ್.ಪಿ ಎಂ.ಸುರೇಶ್ ಮೇಲ್ವಿಚಾರಣೆಯಲ್ಲಿ ವಿನೋಬನಗರ ಠಾಣೆ ಪಿಐ ಚಂದ್ರಕಲಾ ಎಚ್. ಹೊಸಮನಿ ನೇತೃತ್ವದಲ್ಲಿ ಪಿಎಸ್.ಐ ಬಿ.ಸಿ.ಸುನೀಲ್, ಸಿಬ್ಬಂದಿ ಕೆ.ಆರ್. ರಾಜು, ಬಿ.ಚಂದ್ರಾನಾಯ್ಕ್, ಎಸ್.ಜಿ. ಮಲ್ಲಪ್ಪ,‌ ಎನ್.ಕೆ. ಅರುಣಕುಮಾರ್ ಅವರುಗಳನ್ನೊಳಗೊಂಡ ತಂಡ ಆರೋಪಗಳನ್ನು ಬಂಧಿಸಿದೆ. ಕಾರ್ಯಕ್ಕೆ ಎಸ್.ಪಿ ಶ್ಲಾಘಿಸಿದ್ದಾರೆ.

ದೋಷಪೂರಿತ ಸೈಲೆನ್ಸರ್ ಸೀಜ್

bike silencer
ವಶಪಡಿಸಿಕೊಂಡ ದೋಷಪೂರಿತ ಸೈಲೆನ್ಸರ್

SHIMOGA: ನಗರದ ಗಾರ್ಡನ್ ಏರಿಯಾದ ಬ್ಲಾಕ್ ಸ್ಮಿತ್ ಮತ್ತು ವೆಲ್ಡಿಂಗ್ ಅಂಗಡಿಗಳ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿ, ದೋಷಪೂರಿತ ಸೈಲೆನ್ಸರ್ ಗಳನ್ನು ವಶಪಡಿಸಿಕೊಳ್ಳಲಾಯಿತು.
ಶಿವಮೊಗ್ಗ ಬಿ‌ ಉಪ ವಿಭಾಗದ ಡಿವೈಎಸ್.ಪಿ ಎಂ.ಸುರೇಶ್,‌ ಶಿವಮೊಗ್ಗ ಸಂಚಾರ ವೃತ್ತ ಸಿಪಿಐ ಡಿ.ಕೆ.ಸಂತೋಷ್ ಕುಮಾರ್ ಮಾರ್ಗದರ್ಶನದಲ್ಲಿ ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ತಿರುಮಲೇಶ್ ನೇತೃತ್ವದ ಸಿಬ್ಬಂದಿಯ ತಂಡ ಕಾರ್ಯಾಚರಣೆ ನಡೆಸಿದೆ.
ದೋಷಪೂರಿತ ಸೈಲೆನ್ಸರ್ ಗಳನ್ನು ದ್ವಿ ಚಕ್ರ ವಾಹನಗಳಿಗೆ ಅಳವಡಿಸಿಕೊಟ್ಟಲ್ಲಿ ಐಎಂವಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಯಿತು.

error: Content is protected !!