ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕಾನೂನು ಮಾಪನಶಾಸ್ತ್ರ ಇಲಾಖೆಯು ಜಿಲ್ಲೆಯಲ್ಲಿ ಅಂಗಡಿಗಳಿಗೆ ಲಕ್ಷಾಂತರ ದಂಡ ವಿಧಿಸಿದೆ.
2023-24 ನೇ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 2023 ರ ಏಪ್ರಿಲ್ ನಿಂದ ಡಿಸೆಂಬರ್ ವರೆಗೆ ಕೆಳಕಂಡಂತೆ ಪ್ರಗತಿಯನ್ನು ಸಾಧಿಸಿದೆ. ತೂಕ, ಅಳತೆ ಸಾಧನಗಳ ಸತ್ಯಾಪನೆ/ ಮುದ್ರೆಯಿಂ ಸಂಗ್ರಹಿಸಿದ ಶುಲ್ಕ ₹1,53,64,167, ತಪಾಸಣೆ ಮಾಡಿರುವ ವ್ಯಾಪಾರಸ್ಥರ ಮತ್ತು ಕೈಗಾರಿಕೆಗಳ ಸಂಖ್ಯೆ ₹2111, ತಪ್ಪಿತಸ್ಥರ ಮೇಲೆ ಹೂಡಿರುವ ಮೊಕದ್ದಮೆಗಳ ಸಂಖ್ಯೆ ₹483, ರಾಜಿ ಅಭಿಸಂಧಾನ ಮಾಡಿರುವ ಮೊಕದ್ದಮೆಗಳ ಸಂಖ್ಯೆ 486, ಮೊಕದ್ದಮೆಗಳನ್ನು ರಾಜಿ ಅಭಿಸಚಿಧಾನ ಮಾಡಿ ವಿಧಿಸಿದ ದಂಡ ₹16,11,000 ಹಾಗೂ 49 ಗ್ರಾಹಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿರುತ್ತದೆ ಎಂದು ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಎಚ್.ಎಸ್.ರಾಜು ತಿಳಿಸಿದ್ದಾರೆ.