Rudregowda | ಶ್ರೀ ಬಸವ ನಾಮಾಂಕಿತದ ಪ್ಲೇಟ್ ಬ್ಯಾಂಕ್ ಲೋಕಾರ್ಪಣೆ, ಪ್ಲಾಸ್ಟಿಕ್ ತಡೆಗೆ ತಜ್ಞರ ಸಲಹೆಗಳು

Rudregowda 1

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಸವಳಂಗ ರಸ್ತೆಯ ಸರ್ಜಿ ಕನ್ವೆನ್ಷನ್ ಹಾಲ್‍ನಲ್ಲಿ ಶನಿವಾರ ಬೆಳಗ್ಗೆ ಖ್ಯಾತ ಕೈಗಾರಿಕೋದ್ಯಮಿ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡರ ಅಮೃತಮಯಿ ಅಭಿನಂದನಾ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರು ಬಸವ ನಾಮಾಂಕಿತದ ಪ್ಲೇಟ್ ಬ್ಯಾಂಕ್ ಉದ್ಘಾಟನೆ ನೆರವೇರಿಸಿದರು.
ಎಸ್. ರುದ್ರೇಗೌಡರು ಅಭಿನಂದನಾ ಸಮಿತಿಯ ಅಧ್ಯಕ್ಷ ಡಿ.ಜಿ.ಬೆನಕಪ್ಪ, ಪ್ರಧಾನ ಕಾರ್ಯದರ್ಶಿ ಡಾ.ಧನಂಜಯ ಸರ್ಜಿ, ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಓಪನ್ ಮೈಂಡ್ಸ್ ವಲ್ರ್ದ್ ಸ್ಕೂಲ್‍ನ ಮ್ಯಾನೇಜಿಂಗ್ ಟ್ರಸ್ಟಿ ಕೆ.ಕಿರಣ್ ಕುಮಾರ್, ಶ್ರೀ ಬಸವೇಶ್ವರ ವೀರಶೈವ ಸಮಾಜದ ಪದಾಧಿಕಾರಿಗಳಾದ ಎನ್.ರಾಜಶೇಖರ್, ರುದ್ರೇಶ್, ಬಳ್ಳೆಕೆರೆ ಸಂತೋಷ್, ಮೋಹನ್ ಬಾಳೆಕಾಯಿ, ಅನಿತಾ ರವಿಶಂಕರ್, ರೇಣುಕಾರಾಧ್ಯರು ಹಾಜರಿದ್ದರು. ಅಭಿನಂದನಾ ಸಮಿತಿ ವತಿಯಿಂದ ಶ್ರೀ ಬಸವೇಶ್ವರ ವೀರಶೈವ ಸಮಾಜದ ಹಸ್ತಾಂತರಿಸಲಾಯಿತು.
ಪಾಕ ಶಾಲೆಯೇ ಪಾಠ ಶಾಲೆ ಆಗಬೇಕು, ಆಗ ಮಾತ್ರ ತ್ಯಾಜ್ಯ ಕಡಿಮೆಯಾಗುತ್ತದೆ, ಅಲ್ಲದೇ ಪರಿಸರ ಸ್ವಚ್ಛವಾಗಿರಲು ಸಾಧ್ಯ ಎಂದು ಬೆಂಗಳೂರಿನ ಅದಮ್ಯ ಚೇತನ ಫೌಂಡೇಷನ್ನಿನ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಹೇಳಿದರು.
ಅಮೃತಮಯಿ ಅಭಿನಂದನಾ ಕಾರ್ಯಕ್ರಮದ ಅಂಗವಾಗಿ ನಡೆದ ಶ್ರಮದಿಂದ ಸಾರ್ಥಕತೆಯಡೆಗೆ ವಿಚಾರಗೋಷ್ಠಿಯಲ್ಲಿ ಪರಿಸರ ಪ್ರಜ್ಞೆಯೇ ಸಮಾಜ ಸೇವೆ ಕುರಿತು ಅವರು ಮಾತನಾಡಿದರು.

READ |  ರಾಜಕೀಯ ವಲಯದಲ್ಲಿ ಶ್ಯಾಮನೂರು ಶಿವಶಂಕರಪ್ಪರ ಹೇಳಿಕೆ ಸಂಚಲನ, ರಾಘವೇಂದ್ರರನ್ನು ಗೆಲ್ಲಿಸುವಂತೆ ಬಹಿರಂಗ ಮನವಿ

ಪ್ಲಾಸ್ಟಿಕ್ ತಡೆಗೆ ಸಲಹೆಗಳು

Rudregowda 1 1

  1. ಪರಿಸರ ಪ್ರಜ್ಞೆ ಎಂಬುದು ಅಡುಗೆ ಮನೆಯಿಂದಲೇ ಆರಂಭವಾಗುವ ಜೊತೆಗೆ ಜಾಗೃತವಾಗಿದ್ದರೆ ಅದುವೇ ನಿಜವಾದ ಸಮಾಜ ಸೇವೆ.
  2. ಎಲ್ಲ ಕಾರ್ಖಾನೆಗಳಲ್ಲೂ ಒಳ್ಳೆಯ ನೀರೇ ಹೆಚ್ಚು ಬಳಕೆಯಾಗುತ್ತಿದ್ದು, ಬಳ್ಳಾರಿಯಲ್ಲಿ ಮಾತ್ರ ಕೊಳಚೆ ನೀರನ್ನು ಶುದ್ಧೀಕರಣ ಮಾಡಿ ಬಳಕೆ ಮಾಡಲಾಗುತ್ತಿದೆ. ಮತ್ತೆ ಎಲ್ಲೂ ಇಂತ ವ್ಯವಸ್ಥೆ ಇಲ್ಲ. ಅಲ್ಲದೇ ಕೈಗಾರಿಕೆಗಳಿಂದ ಗಾಳಿ, ನೀರು ಕಲುಷಿತವಾಗುತ್ತಿದೆ, ನೀರು ವ್ಯಯವಾಗುತ್ತಿದೆ, ನೀರಿನ ಸದ್ಬಳಕೆ ಮಾಡುವಲ್ಲಿ ನಾವು ಮುಂದಗಬೇಕು.
  3. ಪ್ಲಾಸ್ಟಿಕ್ ಬಳಸುವವರೆಗೂ ತ್ಯಾಜ್ಯ ನಿಲ್ಲದು, ಇಂತಹ ತಪ್ಪನ್ನು ಮಾಡಬಾರದು. ಎಲ್‍ಪಿಜಿ ಇಂಧನದ ಬಳಕೆ ಹೇಗೆ ಕಡಿಮೆ ಮಾಡಬೇಕು ಎಂಬ ಬಗ್ಗೆ ಯೋಚಿಸಬೇಕು. ಇಂಧನವೆಂದರೆ ಸಿಲಿಂಡರ್ ಮಾತ್ರ ಅಲ್ಲ, ಮರು ಉತ್ಪಾದನೆ ಇಂಧನಗಳ ಬಗ್ಗೆ, ಸೌರ ಶಕ್ತಿ ಬಳಕೆಯ ಬಗ್ಗೆ ಯುವ ಪೀಳಿಗೆಗೆ ಹೇಳುವ ಮೂಲಕ ಪರಿಸರ ಪ್ರಜ್ಞೆ ಮೂಡಿಸಬೇಕು.
  4. ಕಸದದಿಂದ ಇಂಧನ ತಯಾರಿಸುವ ಕುರಿತು ಹಾಗೂ ನೀರು, ಬಳಕೆ, ವಿದ್ಯುತ್ ಬಳಕೆ ಬಗ್ಗೆ, ಹಸಿರು ಹೊದಿಕೆ ಬೆಳೆಸುವುದು, ವಾಯು ಮಾಲಿನ್ಯದ ಜಾಗೃತಿ ಮೂಡಿಸುವುದು ಪ್ರತಿಯೊಬ್ಬರ ಹೊಣೆಗಾರಿಕೆಯಾಗಬೇಕು.

ಮೌಲ್ಯಾಧಾರಿತ ರಾಜಕಾರಣ ಇಂದಿನ ಅಗತ್ಯ

Rudregowda 1 DH Shankarmurthy
SHIMOGA: ಮೌಲ್ಯಾಧಾರಿತ ರಾಜಕಾರಣದಿಂದ ದೇಶದ ಉದ್ಧಾರ ಸಾಧ್ಯ. ದೇಶಕ್ಕೆ ಇದರ ಅಗತ್ಯವಿದೆ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿಗಳಾದ ಡಿ.ಎಚ್.ಶಂಕರಮೂರ್ತಿ ಅಭಿಪ್ರಾಯಿಸಿದರು.
‘ಶ್ರಮದಿಂದ ಸಾರ್ಥಕತೆಯಡೆಗೆ’ ವಿಚಾರಗೋಷ್ಠಿಯಲ್ಲಿ ಮೌಲ್ಯಾಧಾರಿತ ರಾಜಕಾರಣ ವಿಷಯ ಕುರಿತು ಅವರು ಮಾತನಾಡಿದರು.
ಬರೀ ರಾಜಕಾರಣಕ್ಕೂ ಮೌಲ್ಯಾಧಾರಿತ ರಾಜಕಾರಣಕ್ಕೂ ಬಹಳ ವ್ಯತ್ಯಾಸವಿದೆ. ಹಣದ ಬಲ ಆಧಾರದ ಮೇಲಿನ ಸರಕಾರದಿಂದ ದೇಶ ಉದ್ಧಾರ ಆಗಿಲ್ಲ. ಇದು ಜನ ಸಾಮಾನ್ಯರಿಗೂ ಗೊತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಆಗಿದೆ. ಈ ಹಿಂದೆ ಸರಕಾರ ನಡೆಸಿದ್ದವರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಬಿಟ್ಟರೆ ಬೇರೆ ಯಾರೂ ಮೌಲ್ಯಾಧಾರಿತ ರಾಜಕಾರಣ ಮಾಡಲಿಲ್ಲ, ಬೇರೆಯವರಿಂದ ದೇಶ ಉದ್ಧಾರವಾಗಿಲ್ಲ ಎಂದು ಅಭಿಪ್ರಾಯಪಟ್ಟರು.
ಆಸ್ತಿ ಮಾಡುವುದು, ರಾಜಕೀಯ ಅಧಿಕಾರ ಮಾಡುವುದು ಆಸ್ತಿ ಅಲ್ಲ, ಆ ಶಕ್ತಿ ಸಮಾಜಕ್ಕಾಗಿ ಉಪಯೋಗಬೇಕು, ಅದು ಬಿಟ್ಟು ಮಕ್ಕಳು, ಮೊಮ್ಮಕ್ಕಳಿಗಾಗಿ ಆಸ್ತಿ ಮಾಡುವುದು ಮೌಲ್ಯಧಾರಿತವಲ್ಲ, ಈ ಕುರಿತು ಗಂಭೀರವಾಗಿ ಯೋಚನೆ ಮಾಡಬೇಕು. ಆದರೀಗ ಮೌಲ್ಯಧಾರಿತ ರಾಜಕಾರಣಕ್ಕೆ ಅವಕಾಶ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಾಯಿ, ಅಣ್ಣ, ತಮ್ಮ, ತಂಗಿ ಇವಯ್ರ್ರನ್ನೂ ಹತ್ತಿರ ಸೇರಿಸಲಿಲ್ಲ. ದೇಶದ ಉದ್ಧಾರಕ್ಕಾಗಿ ಶ್ರಮಿಸುತ್ತಿದ್ದಾರೆ. ದೇಶ ಪ್ರಗತಿ ಸಾಧಿಸಿದೆ. ಸೋತು ಸುಮ್ಮನಾಗುವ ಬದಲು ಜೀವನದಲ್ಲಿ ಸವಾಲು ಸ್ವೀಕರಿಸಿ ಮುನ್ನಡೆಯಬೇಕು. ಆಗ ಸಾಧನೆ ಸಾಧ್ಯ ಎಂದು ಹೇಳಿದರು.

error: Content is protected !!