Ayanur v/s KSE | ಮುಂದುವರಿದ ರೆಬೆಲ್ ಟಾಕ್, “ಸುರಕ್ಷಿತ‌ ಕ್ಷೇತ್ರ ಹಿಡಿದುಕೊಂಡು ಒಂದೆಡೆ ಗೂಟ ಹೊಡೆದುಕೊಂಡು ಕುಳಿತಿಲ್ಲ”

Aynur manjunath

 

 

ಸುದ್ದಿ‌ ಕಣಜ.ಕಾ‌ಂ ಶಿವಮೊಗ್ಗ
SHIVAMOGGA: ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ (Ayanur manjunath) ಮತ್ತು ಶಾಸಕ ಕೆ.ಎಸ್.ಈಶ್ವರಪ್ಪ (KS Eshwarappa) ಅವರ ನಡುವಿನ ಶೀತಲಸಮರ (cold war) ಮುಂದಿವರಿದಿದೆ. ಮಾಧ್ಯಮಗೋಷ್ಠಿಯಲ್ಲಿ ಆಯನೂರು ಅವರು ತೀಕ್ಷ್ಣವಾಗಿ ಟೀಕಿಸಿದ್ದಾರೆ.

Aynur Manjunath
ಶಿವಮೊಗ್ಗದಲ್ಲಿ ಅಳವಡಿಸಿದ ಫ್ಲೆಕ್ಸ್.

READ | ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟ ಕಮೆಂಟ್ ಮಾಡಿದವರಿಗೆ ಲೆಫ್ಟ್-ರೈಟ್ ತೆಗೆದುಕೊಂಡ ಆಯನೂರು

ಸುರಕ್ಷಿತ ಕ್ಷೇತ್ರದಲ್ಲಿ ಗೂಟ ಹೊಡೆದುಕೊಂಡು ಕುಳಿತಿಲ್ಲ
“ಬರೀ ಸುರಕ್ಷಿತ ಕ್ಷೇತ್ರ ಹಿಡಿದುಕೊಂಡು ಒಂದೇ ಕಡೇ ಗೂಟ ಹೊಡೆದುಕೊಂಡು ಕೂತಿಲ್ಲ” ಎಂದು ಪರೋಕ್ಷವಾಗಿ ಈಶ್ವರಪ್ಪಗೆ ಟಾಂಗ್ ನೀಡಿದರು.

ನನ್ನ ಹೋರಾಟವನ್ನು ಅರ್ಥ ಮಾಡಿಕೊಳ್ಳದ, ಬಿಸ್ಕೆಟ್ ಗಾಗಿ ಬದುಕುವವರಿಗೆ ನಾನು ಉತ್ತರ ಕೊಡಬೇಕಿಲ್ಲ. ಅಶ್ಲೀಲವಾಗಿ ಮಾತನಾಡುವ ಕೆಲಸ ಬಿಡಿ. ನಾನು ಮೋದಿಯವರ ಆಶಯದಂತೆ ಮಾತನಾಡುವ ಕೆಲಸ ಮಾಡಿದ್ದೇನೆ. ಮೋದಿಗೆ ಜೈ ಅಂದು, ಅವರ ಆಶಯಕ್ಕೆ ವಿರುದ್ಧವಾಗಿ ಕೆಲಸ ಮಾಡಿದರೆ, ಅಂತಹವರು ಪಕ್ಷ ಹಾಗೂ ಮೋದಿ ವಿರೋಧಿಯಾಗುತ್ತಾರೆ. ಆರ್ ಎಸ್ ಎಸ್ ಹಿರಿಯ ನಾಯಕರ ಆಶಯವು ಇದೆಯಾಗಿದೆ. ನನಗೆ ಈ ಬಾರಿ ಪಕ್ಷ ಅವಕಾಶ ಕೊಡುತ್ತದೆ.
ಆಯನೂರು ಮಂಜುನಾಥ್, ಎಂಎಲ್.ಸಿ

“ಪಕ್ಷ ನನಗೆ ಎಲ್ಲ ಅವಕಾಶವನ್ನು ಮಾಡಿ ಕೊಟ್ಟಿದೆ. ಎಲ್ಲ ಸದನಕ್ಕೂ ಹೋಗಿ ಬಂದಿದ್ದೇನೆ. ನನಗೆ ಟಿಕೆಟ್ ಕೇಳುವ ಹಕ್ಕಿಲ್ಲವೇ. ಈ ಹಿಂದೆ ಹೊಸನಗರ ಕ್ಷೇತ್ರದಲ್ಲೂ ಸ್ಫರ್ಧಿಸಿ, ಶಾಸಕನಾಗಿ ಕೆಲಸ ಮಾಡಿದ್ದೆ. ಪಕ್ಷ ಹೇಳಿದ್ದಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದೆ. ಬಂಗಾರಪ್ಪನವರ ವಿರುದ್ಧ ಪಕ್ಷದಿಂದ ಸ್ಫರ್ಧಿಸಿ, ಲೋಕಸಭೆಗೆ ಹೋಗಿದ್ದೆ. ಪಕ್ಷ ಹೇಳಿದಂತೆ ಮಾಡಿದ್ದೇನೆ. ಬರೀ ಸುರಕ್ಷಿತ ಕ್ಷೇತ್ರ ಹಿಡಿದುಕೊಂಡು ಒಂದೇ ಕಡೇ ಗೂಟ ಹೊಡೆದುಕೊಂಡು ಕೂತಿಲ್ಲ” ಎಂದರು.
ಶಿವಮೊಗ್ಗ ನನಗೆ ಕಾರ್ಯಕ್ಷೇತ್ರ. ಇಲ್ಲೊಂದು ಅವಕಾಶ ಕೊಡಿ ಎಂದು ಕೇಳಿದರೆ ಎಷ್ಟೊಂದು ಅಸಹಿಷ್ಣುತೆ? ನನ್ನ ರೀತಿಯಲ್ಲಿ ಈಶ್ವರಪ್ಪನವರಿಗೂ ಪಕ್ಷ ಅವಕಾಶ ನೀಡಿದೆ. ಸೋತಾಗಲೂ ಪರಿಷತ್ ಸದಸ್ಯರಾಗಿದ್ದಾರೆ. ಪರಿಷತ್ ವಿಪಕ್ಷ ನಾಯಕರು ಕೂಡ ಆಗಿದ್ದರು. ಆರ್.ಕೆ.ಸಿದ್ದರಾಮಣ್ಣ, ಎಂ.ಬಿ.ಭಾನುಪ್ರಕಾಶ್, ಗಿರೀಶ್ ಪಟೇಲ್ ಅವರಂತಹ ಹಲವು ನಾಯಕರು ಇದ್ದಾರೆ. 37 ವರ್ಷಗಳ ಬಳಿಕ ತಮ್ಮ ಮಗನಿಗೆ ಟಿಕೆಟ್ ಕೇಳಿದರೆ ಯಾರಿಗೂ ಕೋಪ ಇಲ್ಲ. ಆದರೆ, ನಾನು ಕೇಳಿದ್ದಕ್ಕೆ ಟೀಕೆ ವ್ಯಕ್ತವಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು‌.

error: Content is protected !!