ಸಿಟಿ ಬಸ್ ಮಾಲೀಕನ ದೂರಿಗೆ ಜೈ ಎಂದ ಗ್ರಾಹಕ ನ್ಯಾಯಾಲಯ, ಕ್ಲೇಮು ನೀಡಲು ತಾಕೀತು

Consumer forum

 

 

ಸುದ್ದಿ ಕಣಜ.ಕಾಂ | DISTRICT | CONSUMER FORUM
ಶಿವಮೊಗ್ಗ: ಸಿಟಿ ಬಸ್ ಮಾಲೀಕರೊಬ್ಬರು ವಿಮಾ ಕಂಪನಿ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ (SHIVAMOGGA DISTRICT CONSUMER DISPUTES REDRESSAL COMMISSION) ಪುರಸ್ಕರಿಸಿದೆ.
ವಿಮಾ ಕಂಪನಿ (Insurance company) ವಿರುದ್ಧ ಅರ್ಜಿದಾರ ಸಿಟಿ ಬಸ್ ಮಾಲೀಕ ಎಸ್.ಎಂ.ಚೇತನ್ ಅವರು ತಮ್ಮ ಬಸ್ ಅಪಘಾತ(Accident)ಕ್ಕೀಡಾದ ಸಂದರ್ಭದಲ್ಲಿ ಬಸ್’ಗೆ ಆದ ಹಾನಿಗೆ ಸಂಬಂಧಿಸಿದಂತೆ ಎದುರುದಾರ ವಿಮಾ ಕಂಪನಿಯಿಂದ ಸೂಕ್ತ ಪರಿಹಾರ ಕೋರಿ ಆಯೋಗದ ಮುಂದೆ ದಾಖಲಿಸಿದ್ದ ಪ್ರಕರಣದಲ್ಲಿ ಪೀಠವು ಎದುರುದಾರರು ಅರ್ಜಿದಾರರಿಗೆ ಬಸ್ ಸರಿಪಡಿಸಿದ ಖರ್ಚು, ಪರಿಹಾರ ಮತ್ತು ನ್ಯಾಯಾಲಯದ ಖರ್ಚು ವೆಚ್ಚ ಪಾವತಿಸುವಂತೆ ಆದೇಶಿಸಿದೆ.

READ | ಮತದಾರರ ಗುರುತಿನ ಚೀಟಿಗೂ ಆಧಾರ್ ಲಿಂಕ್ ಮಾಡುವುದು ಹೇಗೆ, ಪ್ರಯೋಜನಗಳೇನು?

ಪರ್ಮಿಟ್ ವರ್ಗಾವಣೆ ಆಗದ್ದಕ್ಕೆ ಕ್ಲೇಮು ನೀಡಲು ವಿಮಾ ಕಂಪೆನಿ ಹಿಂದೇಟು ಹಾಕಿತ್ತು
ಅರ್ಜಿದಾರರು ಸಿಟಿ ಬಸ್ ಅನ್ನು ರಾಘವೇಂದ್ರರಾವ್ ಎಂಬುವವರಿಂದ 2018ರಲ್ಲಿ ಖರೀದಿಸಿದ್ದು, ಖರೀದಿಯ ನಂತರ ಬಸ್ಸಿನ ಮಾಲೀಕತ್ವ ಮತ್ತು ವಿಮಾ ಪಾಲಿಸಿ ಅರ್ಜಿದಾರರ ಹೆಸರಿಗೆ ಬಂದಿದ್ದರೂ ರೂಟ್ ಪರ್ಮಿಟ್ ಮೂಲ ಮಾಲೀಕರಿಂದ ವರ್ಗಾವಣೆಗೊಂಡಿರುವುದಿಲ್ಲ. ಈ ಬಸ್ ಅಪಘಾತಕ್ಕೀಡಾದ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿರುವ ವ್ಯಕ್ತಿ ಮರಣ ಸಂಭವಿಸುತ್ತದೆ. ಆಗ ಉದ್ರೇಕಿತ ಗುಂಪು ಕಲ್ಲು ತೂರಿ ಗಾಜು, ಕಿಟಕಿ ಮತ್ತು ಬಸ್ಸಿನ ಇತರೆ ವಸ್ತುಗಳನ್ನು ಹಾನಿಗೊಳಿಸಿರುತ್ತಾರೆ.
ಈ ಹಾನಿಗೆ ಸಂಬಂಧಿಸಿದ ಖರ್ಚನ್ನು ನೀಡುವಂತೆ ಇನ್ಶೂರೆನ್ಸ್ ಕಂಪನಿಗೆ ಕೋರಿದಾಗ ಪರ್ಮಿಟ್ ವರ್ಗಾವಣೆಗೊಂಡಿಲ್ಲದ ಕಾರಣ ಕ್ಲೇಮು ನೀಡಲಾಗುವುದಿಲ್ಲವೆಂದು ನಿರಾಕರಿಸಿದ್ದರು. ನೊಂದ ಅರ್ಜಿದಾರರು ಸೂಕ್ತ ಪರಿಹಾರ ಕೋರಿ ಪ್ರಕರಣ ದಾಖಲಿಸಿದ್ದರು.
ರಿಪೇರಿ ಖರ್ಚು ಸೇರಿ ಕೋರ್ಟ್ ವೆಚ್ಚ ಭರಿಸಲು ಆದೇಶ
ದಾಖಲೆಗಳು, ವಾಸ್ತವಾಂಶಗಳನ್ನು ಕೂಲಂಕಶವಾಗಿ ಪರಿಶೀಲಿಸಿ, ಪೀಠವು ಎದುರುದಾರರು ಅರ್ಜಿದಾರರಿಗೆ ಬಸ್ ರಿಪೇರಿ ಮಾಡಿಸಿದ ಖರ್ಚು 19,500 ರೂಪಾಯಿಗಳನ್ನು ಶೇ.8 ಬಡ್ಡಿ ದರ ಸೇರಿಸಿ ನೋಟಿಸ್ ನೀಡಿದ ದಿನಾಂಕದಿಂದ 45 ದಿನಗಳ ಒಳಗೆ ಹಿಂತಿರುಗಿಸಬೇಕು. ಹಾಗೂ ಪರಿಹಾರ 10,000 ರೂಪಾಯಿ ಮತ್ತು 5,000 ರೂಪಾಯಿ ಕೋರ್ಟಿನ ವೆಚ್ಚವನ್ನು ನೀಡಬೇಕೆಂದು ಆದೇಶಿಸಿದೆ.

https://suddikanaja.com/2022/07/07/application-invited-for-ashraya-house-at-shimoga/

Leave a Reply

Your email address will not be published. Required fields are marked *

error: Content is protected !!