
ಸುದ್ದಿ ಕಣಜ.ಕಾಂ| KARNATAKA | POLITICAL NEWS
ಶಿವಮೊಗ್ಗ: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ (siddaramaiah) ವಿರುದ್ಧ ಶಾಸಕ ಕೆ.ಎಸ್.ಈಶ್ವರಪ್ಪ (KS Eshwarappa) ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ (araga jnanendra) ಅವರು ತೀಕ್ಷ್ಣ ವಾಕ್ ಪ್ರಹಾರ ಮಾಡಿದ್ದಾರೆ.
ನಗರದಲ್ಲಿ ಶನಿವಾರ ಪ್ರತ್ಯೇಕವಾಗಿ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಇಬ್ಬರೂ ಆರೋಪಗಳನ್ನು ಮಾಡಿದರು.
ಈಶ್ವರಪ್ಪ ಅವರ ಆರೋಪಗಳೇನು?
‘ಸಂಘ ಪರಿವಾರದ ಬಿಕ್ಕಟ್ಟು ಗಲಭೆಗೆ ಕಾರಣ’ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಈಶ್ವರಪ್ಪ ಕೆಂಡಾಮಂಡಲವಾದರು. ಪ್ರಕೃತಿ ವಿಕೋಪ, ಕೋವಿಡ್ದಂತಹ ಕ್ಲಿಷ್ಟಕರ ಸಂದರ್ಭದಲ್ಲಿಯೂ ಆರ್.ಎಸ್.ಎಸ್. (RSS) ಸ್ವಯಂ ಸೇವಕರು ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ ಸ್ವಯಂ ಸೇವಕರ ಪಾದದ ಧೂಳಿಗೂ ಸಮವಲ್ಲ. ನೀಡಿರುವ ಹೇಳಿಕೆಗಳಿಗೆ ತಕ್ಷಣ ಕ್ಷಮೆ ಕೋರಬೇಕು. ಆರ್.ಎಸ್.ಎಸ್. ಬಗ್ಗೆ ಅವರಿಗೆ ತಿಳಿದುಕೊಳ್ಳಬೇಕೆಂಬ ಆಸಕ್ತಿ ಇದ್ದರೇ ನಾನೇ ಸಂಘ ಪರಿವಾರದ ಶಾಖೆಗೆ ಅವರನ್ನು ಕರೆದುಕೊಂಡು ಹೋಗುತ್ತೇನೆ ಎಂದು ಪುನರುಚ್ಛಿಸಿದರು.
ಬಿಜೆಪಿ ಮುಖಂಡರಾದ ಎನ್.ನಾಗರಾಜ್, ಅಣ್ಣಪ್ಪ, ವಿನ್ಸೆಂಟ್ ರೋಡ್ರಿಗಸ್ ಇದ್ದರು.
READ | ಮತದಾರರ ಗುರುತಿನ ಚೀಟಿಗೂ ಆಧಾರ್ ಲಿಂಕ್ ಮಾಡುವುದು ಹೇಗೆ, ಪ್ರಯೋಜನಗಳೇನು?
ಸಜಹ ಸ್ಥಿತಿಗೆ ಮಂಗಳೂರು
ಮಂಗಳೂರು ಸಹಜ ಸ್ಥಿತಿಗೆ ಬಂದಿದೆ. ಈ ಗಲಭೆಗಳಿಗೆಲ್ಲ ಎನ್’ಕೌಂಟರ್ ಅಥವಾ ಕೊಲೆಗೆ ಕೊಲೆ ಪರಿಹಾರವಲ್ಲ. ಇಂತಹ ಘಟನೆಗಳು ನಡೆದಾಗ ಭಾವನಾತ್ಮಕವಾಗಿ ಜನರು, ಬೆಂಬಲಿಗರು ಆಕ್ರೋಶ ಭರಿತರಾಗುತ್ತಾರೆ. ಇದು ಸಹಜ ಕೂಡ.
ಕಾರ್ಯಕರ್ತರು ಪ್ರತಿಭಟನೆ ಮಾಡುವುದು, ಮನೆಗೆ ನುಗ್ಗಲು ಮುಂದಾಗಿರುವುದು. ಇದೆಲ್ಲ ಸಾಮಾನ್ಯ.ಇದೇ ಕಾರಣಕ್ಕೆ ಅವರೆಲ್ಲ ಕಾಂಗ್ರೆಸ್ ಗೆ ಸೇರ್ಪಡೆಯಾಗುತ್ತಾರೆ ಎಂದೇನಿಲ್ಲ ಎಂದು ತಿಳಿಸಿದರು
ನನಗೆ ಸಿದ್ದರಾಮಯ್ಯ ಅವರಿಂದ ಸರ್ಟಿಫಿಕೇಟ್ ಬೇಡ!.
ನಾನು ನಾಲಾಯಕ ಎಂದು ಸಿದ್ದರಾಮಯ್ಯ ಅವರು ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಅವರು ನೀಡುವ ಸರ್ಟಿಫಿಕೇಟ್ ನನಗೆ ಅಗತ್ಯವಿಲ್ಲ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಎಷ್ಟು ಮಂದಿ ಕೊಲೆಯಾಗಿತ್ತು. ಅಂದು ಇಡೀ ಪೊಲೀಸ್ ಇಲಾಖೆಯನ್ನು ಕೆಂಪಯ್ಯ ಹಿಡಿತಕ್ಕೆ ನೀಡಲಾಗಿತ್ತು. ಪೊಲೀಸರು ಬೀದಿಗಿಳಿದು ಹೋರಾಟ ನಡೆಸಲು ಮುಂದಾಗಿದ್ದರು.ಹೀಗಿರುವಾಗ ಸಿದ್ದರಾಮಯ್ಯ ನನ್ನನ್ನು ಅಸಮರ್ಥ ಎನ್ನುತ್ತಾರೆ. ಸಿದ್ದರಾಮಯ್ಯ ಅವರು ಅಸಮರ್ಥರಾಗಿದ್ದರಿಂದಲೇ ಅವರ ಕ್ಷೇತ್ರದಲ್ಲಿ ಅವರೇ ಸೋತಿದ್ದು ಎಂದು ಕುಟುಕಿದರು.
‘ಅಳಬೇಡಿ, ನಗುತ್ತಲೇ ನನಗೆ ಕಳುಹಿಸಿ… ತಾಯಿಂದರ ಆಶೀರ್ವಾದದಿಂದ ಗೆದ್ದು ಬರುವೆ’