Suicide | ಶಿವಮೊಗ್ಗ ರೈಲ್ವೆ ಪ್ಲಾಟ್ ಫಾರಂನಲ್ಲಿ ಯುವಕ‌ ಆತ್ಮಹತ್ಯೆ, ಗಾಬರಿಯಲ್ಲಿ ಜನ

shivamogga Railway station

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ರೈಲ್ವೆ ನಿಲ್ದಾಣ (shimoga railway station)ದ ಪ್ಲಾಟ್ ಫಾರಂ ನಂ 1 ರಲ್ಲಿ ಭದ್ರಾವತಿ (bhadravathi) ಕಡೆಗೆ ಇರುವ ರೈಲ್ವೆ ನಿಲ್ದಾಣದ ಪ್ಲಾಟ್ ಫಾರಂನ ಶೆಲ್ಟರ್ ಕಂಬಿಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಯುವಕನ‌ ಶವ ಬುಧವಾರ ಸಂಜೆ ಪತ್ತೆಯಾಗಿದೆ.
25-30 ವರ್ಷ ಯುವಕನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಜನರು ಗಾಬರಿಗೆ ಒಳಗಾಗುವಂತೆ ಮಾಡಿದೆ.

READ | ಮನೆಯ ಪಕ್ಕವೇ ಇಟ್ಟಿದ್ದ  ಬೋರ್ ವೆಲ್ ಕೇಸಿಂಗ್ ಪೈಪ್‌ ಕಳ್ಳತನ,‌ ಕಿಂಗ್ ಪಿನ್ ಅರೆಸ್ಟ್

ಜನನಿಬಿಡ ಪ್ರದೇಶದಲ್ಲಿ ಆತ್ಮಹತ್ಯೆ
ಶಿವಮೊಗ್ಗ ನಗರದಲ್ಲಿರುವ ರೈಲ್ವೆ ನಿಲ್ದಾಣದ ಒಂದನೇ ಪ್ಲಾಟ್ ಫಾರಂನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರಿರುತ್ತಾರೆ. ಹೀಗಿರುವಾಗ ಪ್ಲಾಟ್ ಫಾರಂನಲ್ಲೇ ನೇಣು ಹಾಕಿಕೊಂಡಿದ್ದಾನೆ. ಘಟನೆಯ ಬಗ್ಗೆ ಮಾಹಿತಿ ಲಭ್ಯವಾಗಿದ್ದೇ ರೈಲ್ವೆ ಪೊಲೀಸರು ಮತ್ತು ವೈದ್ಯರು ಆಗಮಿಸಿದ್ದಾರೆ. ಯುವಕನನ್ನು‌ ಕೆಳಗಿಳಿಸಿ ವೈದ್ಯರು ಪರಿಶೀಲಿಸಿದ್ದು, ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಶವವನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯ ಶೈತ್ಯಾಗಾರಕ್ಕೆ ಸಾಗಿಸಲಾಗಿದೆ.
ಶಿವಮೊಗ್ಗದಿಂದ ಚಿಕ್ಕಮಗಳೂರಿಗೆ ಸಂಜೆ ಒಂದು ರೈಲಿದ್ದು, ಅದು ತೆರಳುವವರೆಗೆ ಯಾವುದೇ ಸಮಸ್ಯೆ ಇರಲಿಲ್ಲ. ಈ ರೈಲು ಹೋದ ಬಳಿಕ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾವಿಗೆ ಖಚಿತ ಕಾರಣ ಮತ್ತು ವ್ಯಕ್ತಿಯ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.
ಮೃತನ ಚಹರೆಯ ವಿವರ
ಮೃತನು ಸುಮಾರು 5.8 ಅಡಿ ಎತ್ತರ, ಸಾಧಾರಣ ಮೈಕಟ್ಟು, ಸಾಧಾ ಕಪ್ಪು ಮೈಬಣ್ಣ, ಕೋಲು ಮುಖ, ತಲೆಯಲ್ಲಿ ಸುಮಾರು 2 ಇಂಚು ಉದ್ದದ ಕಪ್ಪು ಕೂದಲು ಬಿಟ್ಟಿರುತ್ತಾನೆ. ಸುಮಾರು 1 ಇಂಚು ಉದ್ದದ ಕಪ್ಪು ಗಡ್ಡ- ಮೀಸೆ ಬಿಟ್ಟಿರುತ್ತಾನೆ.
ನೀಲಿ ಗುಲಾಬಿ ಬಣ್ಣದ ಶರ್ಟ್, ಬೂದು ಬಣ್ಣದ ಕಾಟನ್‌ ಪ್ಯಾಂಟ್, ಕೆಂಪು ಬಣ್ಣದ ಉಡುದಾರ ಧರಿಸಿರುತ್ತಾನೆ. ಕೈಯಲ್ಲಿ ಸಿಲ್ವರ್ ಬಣ್ಣದ ಕಡಗ, ಎರಡು ಕಿವಿಯಲ್ಲಿ ಪ್ಯಾಶನ್ ರಿಂಗ್ ಧರಿಸಿರುತ್ತಾನೆ. ಬಲ ಗೈಯಲ್ಲಿ ಅಮ್ಮ ಮತ್ತು ರಾಜ ಹುಲಿ ಹಾಗೂ ತೋಳಿನಲ್ಲಿ ಸುಜಾತ ಎಂದು ಹಚ್ಚೆ ಹಾಕಿಸಿರುತ್ತಾನೆ. ಎಡಗಡೆ ಎದೆ ಮೇಲೆ ವಿಷ್ಣುದಾದ ಎಂದು ಹಚ್ಚೆ ಹಾಕಿಸಿಕೊಂಡಿರುತ್ತಾನೆ.
ವಾರಸುದಾರರು ಇದ್ದಲ್ಲಿ ಶಿವಮೊಗ್ಗ ರೈಲ್ವೆ ಪೊಲೀಸ್ ಎಸ್ಐ ಮೊ.ನಂ. 08182- 222974, 948082124 ಸಂಪರ್ಕಿಸಲು‌ ಕೋರಲಾಗಿದೆ.

Crime News | ಶಿವಮೊಗ್ಗ ರೈಲ್ವೆ ಪ್ಲಾಟ್ ಫಾರಂನಲ್ಲಿ ದಿಢೀರ್ ಕುಸಿದು ಬಿದ್ದ ಮಹಿಳೆ, ಆಸ್ಪತ್ರೆಯಲ್ಲಿ ಸಾವು

 

error: Content is protected !!