ತೋಟದ ಮನೆಯಲ್ಲಿಟ್ಟಿದ್ದ 28 ಚೀಲ ಅಡಿಕೆ ಕಳ್ಳತನ

 

 

ಸುದ್ದಿ ಕಣಜ.ಕಾಂ | TALUK | CRIME NEWS
ಶಿವಮೊಗ್ಗ: ತೋಟದ ಮನೆಯ ಬಾಗಿಲು ಮುರಿದು ಅಂದಾಜು ₹2.50 ಲಕ್ಷ ಮೌಲ್ಯದ ಅಡಿಕೆಯನ್ನು ಕಳ್ಳತನ ಮಾಡಲಾಗಿದೆ.
ತಾಲೂಕಿನ ಮರತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಬ್ಬಚ್ಚಲು ಗ್ರಾಮದ ಎಂ.ಕೆ.ಕೃಷ್ಣಮೂರ್ತಿ ಅವರ ತೋಟದ
ಮನೆಯಲ್ಲಿ ದಾಸ್ತಾನು ಮಾಡಿದ್ದ 28 ಅಡಿಕೆ ಮೂಟೆಗಳನ್ನು ರಾತ್ರಿ ಹೊತ್ತಿಲ್ಲಿ ಕಳ್ಳತನ ಮಾಡಲಾಗಿದೆ.
ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತನಿಖೆ ನಡೆಯುತ್ತಿದೆ.

error: Content is protected !!