ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೋವಿಡ್ ಶಿವಮೊಗ್ಗ ಜಿಲ್ಲೆಗೆ ಕಾಲಿಟ್ಟು ಎಂಟು ತಿಂಗಳು ಗತಿಸಿವೆ. ಆದರೆ, ಇದೇ ಮೊದಲ ಸಲ ಸಕ್ರಿಯ ಪ್ರಕರಣಗಳ ಸಂಖ್ಯೆ ನೂರಕ್ಕಿಂತ ಕಡಿಮೆಯಾಗಿದೆ. ಮಂಗಳವಾರದ ವರದಿ ಅನ್ವಯ ಜಿಲ್ಲೆಯಲ್ಲಿ 95 ಪ್ರಕರಣಗಳಿವೆ. ಈ ಹಿಂದೆ ಸಹ 100ಕ್ಕೆ ಇಳಿದ ಪ್ರಕರಣಗಳು ಮತ್ತೆ ಏರಿಕೆ ಕಂಡಿದ್ದವು.
ತಾಲೂಕುವಾರು ವರದಿ: ಶಿವಮೊಗ್ಗ 4, ಭದ್ರಾವತಿ 0, ಶಿಕಾರಿಪುರ 2, ತೀರ್ಥಹಳ್ಳಿ 0, ಸೊರಬ 0, ಸಾಗರ 0, ಹೊಸನಗರ 0 ಪ್ರಕರಣ ಪತ್ತೆಯಾಗಿವೆ.
ಮಂಗಳವಾರ ಹೊಸದಾಗಿ 6 ಜನರಲ್ಲಿ ಕೊರೊನಾ ಸೋಂಕು ಕಂಡುಬಂದಿದೆ. 11 ಜನ ಗುಣಮುಖರಾಗಿದ್ದಾರೆ. ಇಂದೂ ಯಾವುದೇ ಸಾವು ಸಂಭವಿಸಿಲ್ಲ. ಇದುವರೆಗೆ 348 ಜನ ಮೃತಪಟ್ಟಿದ್ದಾರೆ. ಗಂಟಲು ದ್ರವದ ಮಾದರಿಯನ್ನು ನಿರಂತರ ಸಂಗ್ರಹಿಸುವ ಕಾರ್ಯ ಚಾಲ್ತಿಯಲ್ಲಿದ್ದು, ಇಂದು 1816 ಜನ ಮಾದರಿ ಪಡೆಯಲಾಗಿದೆ. 1726 ಜನರ ವರದಿ ನೆಗೆಟಿವ್ ಬಂದಿವೆ. ಪ್ರಸಕ್ತ ಮೆಗ್ಗಾನ್ ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್ ನಲ್ಲಿ 22 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಒಂದಕ್ಕೆ ಇಳಿಕೆಯಾಗಿದೆ. 72 ಜನ ಮನೆ ಆರೈಕೆಯಲ್ಲಿದ್ದಾರೆ.