ಸುದ್ದಿ ಕಣಜ.ಕಾಂ
ಶಿವಮೊಗ್ಗ: ಅಡಿಕೆ ವರ್ತಕರ ಹಿತದೃಷ್ಟಿಯಿಂದ ಎಪಿಎಂಸಿ ಪ್ರಾಂಗಣ ಮತ್ತು ಬಾಹ್ಯ ವಲಯದಲ್ಲಿ ನಡೆಯುವ ಅಡಿಕೆ ವ್ಯಾಪಾರದ ಮೇಲೆ ಏಕರೂಪತೆ ತೆರಿಗೆ ಜಾರಿ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿ ಶಿವಮೊಗ್ಗ ಅಡಿಕೆ ವರ್ತಕರ ಸಂಘದಿಂದ ಡಿಸೆಂಬರ್ 21 ಮತ್ತು 22ರಂದು ಸಾಂಕೇತಿಕವಾಗಿ ಎಲ್ಲ ವ್ಯವಹಾರ ಬಂದ್ ಮಾಡಲಾಗುವುದೆಂದು ಕಾರ್ಯದರ್ಶಿ ಕೆ.ಸಿ. ಮಲ್ಲಿಕಾರ್ಜುನ ತಿಳಿಸಿದ್ದಾರೆ.
ಸಂತ್ರಸ್ತ ಕುಟುಂಬ ಹಸನಾಯ್ತು, ಇದು ರಾಜ್ಯದಲ್ಲೇ ವಿಶಿಷ್ಟ ಪ್ರಕರಣ
ಕೇಂದ್ರ ಸರ್ಕಾರವು ರೈತರ ಉತ್ಪನ್ನಗಳ ಮಾರಾಟ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಈ ಕಾಯ್ದೆ ಅನ್ವಯ ರೈತರು ತಾವು ಬೆಳೆದ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಆದರೆ, ಎಪಿಎಂಸಿ ಪ್ರಾಂಗಣದಲ್ಲಿ ವ್ಯಾಪಾರ ಮಾಡುವ ವರ್ತಕರು ತಾವು ಖರೀದಿ ಮಾಡುವ ಉತ್ಪನ್ನಗಳಿಗೆ ಶೇಕಡ 1 ಸೆಸ್ ಕಟ್ಟಬೇಕಾಗಿರುತ್ತದೆ. ಪ್ರಾಂಗಣದ ಹೊರಗೆ ನಡೆಯುವ ಖರೀದಿಗಳಿಗೆ ಯಾವುದೇ ರೀತಿಯ ಸೆಸ್ ಇರುವುದಿಲ್ಲ. ಇದು ಅತ್ಯಂತ ಅವೈಜ್ಞಾನಿಕವಾಗಿದೆ ಎಂದು ಹೇಳಿದ್ದಾರೆ.