ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯ 9 ಆರೋಗ್ಯ ಸಂಸ್ಥೆಗಳಲ್ಲಿ ಕೋವಿಡ್ ಲಸಿಕೆಯನ್ನು ನೀಡಲಾಗಿದ್ದು, ಮೊದಲ ದಿನ ನಿರೀಕ್ಷಿತ ಸ್ಪಂದನೆ ವ್ಯಕ್ತವಾಗಿಲ್ಲ.
ಶನಿವಾರ 847 ಜನ ಆರೋಗ್ಯ ಸಿಬ್ಬಂದಿಗೆ ಲಸಿಕೆ ಹಾಕುವ ಗುರಿ ಇತ್ತು. ಇದರಲ್ಲಿ 470 ಜನ ಮಾತ್ರ ಲಸಿಕೆ ಹಾಕಿಸಿಕೊಂಡಿದ್ದಾರೆ.
ಇದನ್ನೂ ಓದಿ । ಉಚಿತವಾಗಿ ಕೋವಿಡ್ ಲಸಿಕೆ ನೀಡುವ ಬಗ್ಗೆ ಶೀಘ್ರವೇ ಸಂಪುಟದಲ್ಲಿ ನಿರ್ಧಾರ
ಶೇ.55.49ರಷ್ಟು ಜನ ಲಸಿಕೆ ಪಡೆದಿದ್ದು, ಯಾರ ಆರೋಗ್ಯದ ಮೇಲೆಯೂ ಅಡ್ಡ ಪರಿಣಾಮಗಳು ಆಗಿಲ್ಲ. ಪ್ರತಿ ಆರೋಗ್ಯ ಸಂಸ್ಥೆಯಲ್ಲಿ 100ರ ರಂತೆ ಒಟ್ಟು 9 ಆರೋಗ್ಯ ಸಂಸ್ಥೆಗಳಲ್ಲಿ ಒಟ್ಟು 847 ಸಿಬ್ಬಂದಿಗೆ ಲಸಿಕೆ ನೀಡಬೇಕಿತ್ತು.
ಮೊದಲ ದಿನ 847 ಜನ ಆರೋಗ್ಯ ಸಿಬ್ಬಂದಿಯಲ್ಲಿ 470 ಜನ ಲಸಿಕೆ ಹಾಕಿಸಿಕೊಂಡಿದ್ದಾರೆ. ಯಾರಲ್ಲೂ ಯಾವುದೇ ರೀತಿಯ ಆರೋಗ್ಯದ ಸಮಸ್ಯೆಗಳು ಉಲ್ಬಣಿಸಿಲ್ಲ. ಶೇ.55.49ರಷ್ಟು ಆರೋಗ್ಯ ಸಿಬ್ಬಂದಿ ಲಸಿಕೆ ಪಡೆದಿದ್ದಾರೆ. ಇನ್ಮುಂದೆ ಹೆಚ್ಚು ಜನ ಸ್ವಯಂ ಪ್ರೇರಿತರಾಗಿ ಲಸಿಕೆ ಪಡೆದುಕೊಳ್ಳಬಹುದಾಗಿದೆ.
– ಡಾ.ರಾಜೇಶ್ ಸುರಗೀಹಳ್ಳಿ, ಡಿಎಚ್ಒ, ಶಿವಮೊಗ್ಗ
ತಾಲೂಕುವಾರು ಮಾಹಿತಿ: ಶಿವಮೊಗ್ಗ ತಾಲೂಕಿನ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿ 100 ಜನರಲ್ಲಿ 60 ಜನ (ಶೇ.60)ಲಸಿಕೆ ಹಾಕಿಸಿಕೊಂಡಿದ್ದಾರೆ. ತುಂಗಾನಗರದ ನಗರ ಆರೋಗ್ಯ ಕೇಂದ್ರದಲ್ಲಿ 90ರಲ್ಲಿ 47 (ಶೇ.52.22), ಭದ್ರಾವತಿ ತಾಲೂಕಿನ ಸಾರ್ವಜನಿಕ ಆಸ್ಪತ್ರೆ 100ರಲ್ಲಿ 67 (ಶೇ.67), ತೀರ್ಥಹಳ್ಳಿಯ ಶ್ರೀ ಜಯಚಾಮರಾಜೇಂದ್ರ ತಾಲೂಕು ಆಸ್ಪತ್ರೆ 100ರಲ್ಲಿ 69, ಹೊಸನಗರದ ಸಾರ್ವಜನಿಕ ಆಸ್ಪತ್ರೆ 100ರಲ್ಲಿ 62, ಸಾಗರದ ಸಾರ್ವಜನಿಕ ಆಸ್ಪತ್ರೆ 100ರಲ್ಲಿ 33, ಸೊರಬ ಸಾರ್ವಜನಿಕ ಆಸ್ಪತ್ರೆಯಲ್ಲಿ 100ಕ್ಕೆ 37, ಶಿಕಾರಿಪುರ ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ 100ಕ್ಕೆ 49, ಚಿಕ್ಕಜೋಗಿಹಳ್ಳಿ ಪ್ರಾದೇಶಿಕ ಆರೋಗ್ಯ ಕೇಂದ್ರದಲ್ಲಿ 57ರಲ್ಲಿ 46 ಜನ ಲಸಿಕೆ ಹಾಕಿಸಿಕೊಂಡರು.