ಸುದ್ದಿ ಕಣಜ.ಕಾಂ
ಶಿವಮೊಗ್ಗ: ಆಲ್ಕೋಳ ವಿದ್ಯುತ್ ವಿತರಣ ಕೇಂದ್ರದಿಂದ ಸರಬರಾಜಾಗುವ ಎಎಫ್ 6, 7, 11 ರಲ್ಲಿ ಸ್ಮಾರ್ಟ್ಸಿಟಿ ಕಾಮಗಾರಿ ಹಮ್ಮಿಕೊಂಡಿದ್ದು ಈ ವಿದ್ಯುತ್ ವಿತರಣ ಮಾರ್ಗಗಳಿಂದ ಸರಬರಾಜಾಗುವ ಪ್ರದೇಶಗಳಲ್ಲಿ ಫೆಬ್ರವರಿ 21ರಂದು ಬೆಳಗ್ಗೆ 10ತಿ.ದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ನಗರ ಉಪ ವಿಭಾಗ 3ರ ಎಇಇ ಪ್ರಕಟಣೆಯಲ್ಲಿ ಕೋರಿದ್ದಾರೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ | ಸಾಗರ ರಸ್ತೆ ಕೈಗಾರಿಕ ಪ್ರದೇಶ, ಎಪಿಎಂಸಿ ಮಾರುಕಟ್ಟೆ, ಶಿವ ಟೈರ್ಸ್, ಪೊಲೀಸ್ ಚೌಕಿ, ಮೇದಾರ ಕೇರಿ, ವಿಕಾಸ ಶಾಲೆ ಹಾಗೂ ಸುತ್ತಮುತ್ತಲಿನ ಪ್ರದೇಶ.