ಸುದ್ದಿ ಕಣಜ.ಕಾಂ
ಶಿವಮೊಗ್ಗ: ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಗಳಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ 9 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರು | ಶಿವಮೊಗ್ಗದ ಎಂಕೆಕೆ ರಸ್ತೆಯ ಅಮಾನುಲ್ಲಾ (57), ಭದ್ರಾಪುರದ ಮಂಜುನಾಥ್ (37), ಬುದ್ಧನಗರದ ಸೈಯದ್ ಶೋಯೇಬ್ ಅಲಿಯಾಸ್ ಮಡ್ಡ(28), ಶೋಯೇಬ್ ಅಲಿಯಾಸ್ ನೂರುಲ್ಲಾ (29), ಸೋಮಿನಕೊಪ್ಪದ ಇನಾಯತ್ ಖಾನ್ (32), ಸೀಗೆಹಟ್ಟಿಯ ಆನಂದ್ (32), ಅಣ್ಣಾನಗರದ ಜುನೇದ್ ಪಾಶಾ (20), ಎಂಕೆಕೆ ರಸ್ತೆಯ ಇಫಾಮುಲ್ಲಾ, ಬುದ್ಧನಗರದ ಸೈಯದ್ ಗೌಸ್ ಎಂಬುವವರನ್ನು ಬಂಧಿಸಲಾಗಿದೆ.
ಆರೋಪಿಗಳ ಪೈಕಿ ಒಬ್ಬ ಕಳೆದ 5 ವರ್ಷಗಳಿಂದ, ಇಬ್ಬರು ಆರೋಪಿಗಳು ಕಳೆದ 2 ವರ್ಷಗಳಿಂದ ಹಾಗೂ 6 ಮಂದಿ ಕಳೆದ 1 ವರ್ಷದಿಂದ ನ್ಯಾಯಾಲಯದ ವಿಚಾರಣೆಗೆ ಗೈರು ಹಾಜರಾಗಿದ್ದರು. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಆರೋಪಿಗಳ ಪತ್ತೆಗೆ ದೊಡ್ಡಪೇಟೆ ಪೊಲೀಸ್ ಠಾಣೆಯ ಪಿ.ಐ ವಸಂತ್ ಕುಮಾರ್ ಅವರು ಠಾಣೆ ಸಿಬ್ಬಂದಿ ಎಚ್.ಸಿ ಮೋಹನ್, ಎಂ.ಹೆಚ್ ಮಂಜಪ್ಪ ಮತ್ತು ಪಿಸಿ ಸ್ವಾಮಿ, ಮಹದೇವ್ ತಂಡ ರಚಿಸಿದ್ದರು. ತಂಡ ಕಳೆದ ಮೂರು ದಿನಗಳಲ್ಲಿ ನ್ಯಾಯಾಲಯದ ವಿಚಾರಣೆಗೆ ಗೈರು ಹಾಜರಾಗಿದ್ದ 9 ಜನ ಆರೋಪಿಗಳನ್ನು ಬಂಧಿಸಿದ್ದಾರೆ.