ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸೊರಬದಲ್ಲಿ ಎರಡನೇ ದಿನವೂ ಯಾವುದೇ ಸೋಂಕು ಪತ್ತೆಯಾಗಿಲ್ಲ. ಭದ್ರಾವತಿಯಲ್ಲಿ ಇದೇ ಮೊದಲ ಸಲ ಭಾರಿ ಕಡಿಮೆ ಸಂಖ್ಯೆಯ ಪ್ರಕರಣ ದಾಖಲಾಗಿವೆ.
https://www.suddikanaja.com/2021/06/29/covid-case-decline/
ತಾಲೂಕುವಾರು ವರದಿ | ಶಿವಮೊಗ್ಗದಲ್ಲಿ 52, ಭದ್ರಾವತಿ 8, ಶಿಕಾರಿಪುರ 2, ತೀರ್ಥಹಳ್ಳಿ 5, ಸೊರಬ 0, ಹೊಸನಗರ ಸಾಗರ ತಲಾ 7, ಬಾಹ್ಯ ಜಿಲ್ಲೆಯ 3 ಜನರಲ್ಲಿ ಸೋಂಕು ಇರುವುದು ಪತ್ತೆಯಾಗಿದೆ.
ಜಿಲ್ಲಾಡಳಿತ ಮಂಗಳವಾರ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಜಿಲ್ಲೆಯಲ್ಲಿ 84 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. 61 ಜನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. 3 ಜನ ಮೃತಪಟ್ಟಿದ್ದಾರೆ.
ಸೋಂಕಿತರ ಸಂಪರ್ಕದಲ್ಲಿದ್ದ ಹಾಗೂ ರೋಗದ ಲಕ್ಷಣಗಳನ್ನು ಹೊಂದಿರುವ 3,770 ಜನರ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಹಳೆಯದ್ದೂ ಸೇರಿ ಒಟ್ಟು 2,604 ವರದಿಗಳು ನೆಗೆಟಿವ್ ಇರುವುದು ದೃಢಪಟ್ಟಿದೆ.
ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ 128 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದಂತೆ, ಡಿಸಿಎಚ್ಸಿ 65, ಕೋವಿಡ್ ಕೇರ್ ಸೆಂಟರ್ ನಲ್ಲಿ 136, ಖಾಸಗಿ ಆಸ್ಪತ್ರೆಯಲ್ಲಿ 82, ಹೋಮ್ ಐಸೋಲೇಷನ್ ನಲ್ಲಿ 398 ಹಾಗೂ ಟ್ರಿಯೇಜ್ ಕೇಂದ್ರದಲ್ಲಿ 48 ಸೋಂಕಿತರಿದ್ದಾರೆ. 857 ಸಕ್ರಿಯ ಪ್ರಕರಣಗಳಿವೆ.
https://www.suddikanaja.com/2021/06/19/covid-lockdown-relax-in-some-district-in-karnataka/