ಸುದ್ದಿ ಕಣಜ.ಕಾಂ | CITY | CRIME
ಶಿವಮೊಗ್ಗ: ಬಿ.ಎಚ್.ರಸ್ತೆಯ ಮೀನಾಕ್ಷಿ ಭವನ ಕ್ರಾಸ್ ನಲ್ಲಿ ಕ್ಯಾಂಟರ್ ಲಾರಿಯೊಂದು ಭಾನುವಾರ ರಾತ್ರಿ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದಿದ್ದು, ಅವರು ತೀವ್ರ ಗಾಯಗೊಂಡು ಮೃತಪಟ್ಟಿದ್ದಾರೆ.
ನಿದಿಗೆಯ ಜನತಾ ಕಾಲೊನಿ ನಿವಾಸಿ 50 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಬೈಕ್ ನಲ್ಲಿ ಹೋಗುತ್ತಿದ್ದಾಗ ಹೊಳೆ ಬಸ್ ಸ್ಟಾಪ್ ಕಡೆಯಿಂದ ಬಂದ ಕ್ಯಾಂಟರ್ ಲಾರಿ ಡಿಕ್ಕಿ ಹೊಡೆದು ಮುಂಭಾಗದ ಚಕ್ರ ಅವರ ಎದೆ ಮೇಲೆ ಹತ್ತಿ ಹೋಗಿದ್ದು, ತೀವ್ರ ಸ್ವರೂಪದ ರಕ್ತಗಾಯಗಳಾಗಿ ಮೃತಪಟ್ಟಿದ್ದಾರೆ.
ಚಾಲಕ ಲಾರಿಯನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ಬೈಕಿಗೆ ಡಿಕ್ಕಿ ಹೊಡೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಪೂರ್ವ ಸಂಚಾರಿ ಪೊಲೀಸ್ ಠಾಣೆ ಶಿವಮೊಗ್ಗದಲ್ಲಿ ಮಾರಣಾಂತಿಕ ಅಪಘಾತ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಳ್ಳಲಾಗುತ್ತಿದೆ.