ಸುದ್ದಿ ಕಣಜ.ಕಾಂ | TALUK | CRIME NEWS
ಶಿವಮೊಗ್ಗ: ಹೊಸ ಟ್ರಾಕ್ಟರ್ ಟ್ರಯಲ್ ಡ್ರೈವ್ ಮಾಡುತಿದ್ದಾಗ ಮಗುಚಿ ಬಿದ್ದ ಪರಿಣಾಮ ಯುವಕನೊಬ್ಬ ದಾರುಣವಾಗಿ ಮೃತಪಟ್ಟಿದ್ದಾರೆ.
ಹೊನ್ನಾಪುರ ತಾಂಡಾ ನಿವಾಸಿ ಶಶಿಕುಮಾರ್ ನಾಯ್ಕ್ (27) ಎಂಬಾತ ಮೃತಪಟ್ಟಿದ್ದಾರೆ. ಹೊಸಕೊಪ್ಪ ತಾಂಡಾ ಬಳಿಯ ಚಾನಲ್ ಹತ್ತಿರ ಘಟನೆ ಬುಧವಾರ ಸಂಭವಿಸಿದೆ.
ಅಪಘಾತ ತಪ್ಪಿಸಲು ಹೋಗಿ ಪಲ್ಟಿ
ಹೊಸ ಟ್ರಾಕ್ಟರ್ ಖರೀದಿಸಿ ಅದರ ಟ್ರಯಲ್ ನೋಡುವಾಗ ಎದುರುಗಡೆ ವಾಹನವೊಂದು ಬಂದಿದೆ. ಅಪಘಾತ ತಪ್ಪಿಸಲು ಹೋದಾಗ ಟ್ರಾಕ್ಟರ್ ಮಗುಚಿ ಉರುಳಿದೆ. ತಕ್ಷಣ ಸ್ಥಳದಲ್ಲಿದ್ದ ಕೆಲವರು ಟ್ರಾಕ್ಟರ್ ಅಡಿ ಸಿಲುಕಿದ್ದ ಶಶಿ ಅವರನ್ನು ಹೊರಗಡೆ ತೆಗೆದಿದ್ದಾರೆ. ಆದರೆ, ಜನರ ಪ್ರಯತ್ನ ಫಲ ನೀಡಿಲ್ಲ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.