ಸುದ್ದಿ ಕಣಜ.ಕಾಂ | DISTRICT | HEALTH NEWS
ಶಿವಮೊಗ್ಗ: ಇಂದು ಸೋಂಕಿತರ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, ಗುಣಮುಖರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಶನಿವಾರ 264 ಮಂದಿಗೆ ಕೊರೊನಾ ಪಾಸಿಟಿವ್ ಇರುವುದರು ದೃಢಪಟ್ಟಿದ್ದು, 499 ಜನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
ರೋಗದ ಲಕ್ಷಣ ಹೊಂದಿರುವ 1,497 ಮಂದಿಯ ಗಂಟಲು ದ್ರವದ ಮಾದರಿಗಳನ್ನು ಸಂಗ್ರಹಿಸಿದ್ದು, 1,914 ವರದಿಗಳು ನೆಗೆಟಿವ್ ಬಂದಿವೆ. ಇಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ.
READ | ಶಿವಮೊಗ್ಗಕ್ಕೆ 2 ‘ಕೃಷಿ ಸಂಜೀವಿನಿ’ ವಾಹನ, ರೈತರಿಗೆ ಸಂಚಾರಿ ಆರೋಗ್ಯ ಚಿಕಿತ್ಸಾಲಯದ ಪ್ರಯೋಜನವೇನು?
ಶಿವಮೊಗ್ಗ ತಾಲೂಕಿನಲ್ಲಿ 73 ಮಂದಿಗೆ ಸೋಂಕು ದೃಢಪಟ್ಟಿದೆ. ಭದ್ರಾವತಿಯಲ್ಲಿ 34, ತೀರ್ಥಹಳ್ಳಿಯಲ್ಲಿ 47, ಶಿಕಾರಿಪುರದಲ್ಲಿ 27, ಸಾಗರದಲ್ಲಿ 33, ಹೊಸನಗರದಲ್ಲಿ 20, ಸೊರಬದಲ್ಲಿ 25 ಹಾಗೂ ಬಾಹ್ಯ ಜಿಲ್ಲೆಯ 5 ಜನರಲ್ಲಿ ಸೋಂಕು ಪತ್ತೆಯಾಗಿದೆ.
ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ
ಸಕ್ರಿಯ ಪ್ರಕರಣಗಳ ಸಂಖ್ಯೆ 2,107ಕ್ಕೆ ಇಳಿಕೆಯಾಗಿದೆ. ಕೋವಿಡ್ ಆಸ್ಪತ್ರೆಯಲ್ಲಿ 55 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿಸಿಎಚ್.ಸಿಯಲ್ಲಿ 22, ಖಾಸಗಿ ಆಸ್ಪತ್ರೆಯಲ್ಲಿ 9, ಟ್ರಯಾಜ್ ನಲ್ಲಿ 10 ಹಾಗೂ ಮನೆ ಆರೈಕೆಯಲ್ಲಿ 2,011 ಸೋಂಕಿತರಿದ್ದಾರೆ.
https://www.suddikanaja.com/2021/06/24/covid-active-case-decline-in-shivamogga/