ಸುದ್ದಿ ಕಣಜ.ಕಾಂ | SHIVAMOGGA NEWS
ಶಿವಮೊಗ್ಗ(shimoga): ನಗರದ ಸಿಟಿ ಸೆಂಟರ್ ಮಾಲ್(city center mall)ನಲ್ಲಿರುವ ಭಾರತ್ ಸಿನೆಮಾಸ್(Bharat cinemas)ನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (BS Yediyurappa) ಅವರು ಕುಟುಂಬದೊಂದಿಗೆ “ಗಂಧದ ಗುಡಿ(Gandhada gudi )’ ಚಲನಚಿತ್ರ ವೀಕ್ಷಿಸಿದರು.
READ | ಶಿವಮೊಗ್ಗದ ಪಶುವೈದ್ಯಕೀಯ ಕಾಲೇಜಿನಲ್ಲಿ ಉದ್ಯೋಗ, ಮಾಸಿಕ 57,600 ರೂ. ವೇತನ
ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Puneeth rajkumar) ಅಭಿನಯದ ಗಂಧದ ಗುಡಿ ಚಿತ್ರವನ್ನು ವೀಕ್ಷಿಸುವುದಕ್ಕಾಗಿ ಯಡಿಯೂರಪ್ಪ ಅವರು ಪುತ್ರರಾದ ಸಂಸದ ಬಿ.ವೈ.ರಾಘವೇಂದ್ರ (BY Raghavendra) ಹಾಗೂ ಅವರ ಪತ್ನಿ ತೇಜಸ್ವಿನಿ ಅವರೊಂದಿಗೆ ಭಾರತ್ ಸಿನೆಮಾಸ್’ಗೆ ಗುರುವಾರ ಆಗಮಿಸಿದ್ದರು. ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ, ಸೂಡಾ ಮಾಜಿ ಅಧ್ಯಕ್ಷ ಜ್ಯೋತಿಪ್ರಕಾಶ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಬಿ.ಚನ್ನವೀರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಸೆಲ್ಫಿ
ಯಡಿಯೂರಪ್ಪ ಅವರು ಸಿಟಿ ಸೆಂಟರ್ ಮಾಲ್ ಒಳಗಡೆ ಬಂದಿದ್ದೇ ಜನರು ಅತ್ಯಂತ ಪ್ರೀತಿಯಿಂದ ಒಳಗಡೆ ಬರಮಾಡಿಕೊಂಡರು. ಹಲವರು ಬಿಎಸ್.ವೈ ಜತೆ ಸೆಲ್ಫಿ ತೆಗೆಸಿಕೊಳ್ಳುವುದಕ್ಕಾಗಿ ಮುಗಿಬಿದ್ದರು. ಅಷ್ಟೇ ಸಮಾಧಾನದಿಂದ ಫೋಟೊಗಳನ್ನು ತೆಗೆಸಿಕೊಂಡರು.