ಸುದ್ದಿ ಕಣಜ.ಕಾಂ | Shivamogga news
ಶಿವಮೊಗ್ಗ(Shivamogga): ತೊಂದರೆಯಲ್ಲಿರುವ ಹಿರಿಯರಿಗೆ ಸಾಧ್ಯವಾಗುವ ಬೆಂಬಲ ಮತ್ತು ಉಚಿತ ಕಾನೂನಿನ ನೆರವು ಸೇರಿದಂತೆ ಹಿರಿಯ ನಾಗರಿಕರಿಗೆ ಸಹಾಯ ಮಾಡಲು ಸಹಾಯವಾಣಿ (helpline) ಸಂಖ್ಯೆ 1090 ಸ್ಥಾಪಿಸಲಾಗಿದ್ದು, ಉಚಿತವಾಗಿ ಕರೆ ಮಾಡಿ ಸಹಾಯ ನೆರವು, ಸಲಹೆ ಪಡೆಯಬಹುದು.
TOP 10 NEWS | ಶಿವಮೊಗ್ಗದ ಇಂದಿನ ಟಾಪ್ 10 ಸುದ್ದಿಗಳು, ಜಿಲ್ಲೆಯ ವಿವಿಧ ಬೆಳವಣಿಗೆಗಳ ಮಾಹಿತಿ ಇಲ್ಲಿದೆ
ಲಭ್ಯವಿರುವ ಪ್ರಮುಖ ಮೂರು ಸೇವೆಗಳು
- ಹಿರಿಯರು ಎದುರಿಸುತ್ತಿರುವ ತೊಂದರೆಗಳನ್ನು ಆಲಿಸಿ, ಅವರಿಗೆ ಸೂಕ್ತ ಮಾರ್ಗದರ್ಶನ/ಸಲಹೆ ಕೊಡುವುದು. ತೀರ ಅಗತ್ಯವಿದ್ದಲ್ಲಿ ಪೊಲೀಸ್ ನೆರವಿನಿಂದ ಸಮಸ್ಯೆ ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳುವುದು.
- ಕೌಟುಂಬಿಕ ವಿಷಯಗಳಲ್ಲಿ ರಾಜಿ ಮಾಡಿಸುವುದು. ವೈದ್ಯಕೀಯ ಸಲಹೆ ಮತ್ತು ಸೇವೆಯು ಒದಗಿಸುವುದು, ನಿರ್ಲಕ್ಷಿಸಲ್ಪಟ್ಟ, ತೊರೆಯಲ್ಪಟ್ಟ ಹಿರಿಯರಿಗೆ ಜೀವನಕ್ಕಾಗಿ ಅಗತ್ಯಬಿದ್ದಲ್ಲಿ ಪುನರ್ವಸತಿ(ವೃದ್ದಾಶ್ರಮ) ಸೌಕರ್ಯ ಒದಗಿಸುವುದು.
- ವಿವಾದಗಳನ್ನು ಬಗೆಹರಿಸಲು ಬೇರೆ ಮಾರ್ಗೋಪಾಯಗಳನ್ನು ಸೂಚಿಸುವುದು, ಹಿರಿಯ ನಾಗರೀಕರ ಗುರುತಿನ ಚೀಟಿ ಮಾಡಿಸುವುದು ಮತ್ತು ಹಿರಿಯ ನಾಗರಿಕರ ವೃದ್ದಾಪ್ಯವೇತನ ಮಾಡಿಸಿಕೊಡಲಾಗುವುದು.
ಹೆಚ್ಚಿನ ಮಾಹಿತಿಗೆ ಡಿವೈಎಸ್ಪಿ ಕಚೇರಿ, ಸಾಗರ ರಸ್ತೆ, ಶಿವಮೊಗ್ಗ ದೂರವಾಣಿ ಸಂಖ್ಯೆ 08182-221188/260424 ಅನ್ನು ಸಂಪರ್ಕಿಸಬಹುದೆಂದು ಹಿರಿಯ ನಾಗರಿಕರ ಸಹಾಯವಾಣಿ ಯೋಜನಾ ಸಂಯೋಜಕರು ತಿಳಿಸಿದ್ದಾರೆ.