
ಸುದ್ದಿ ಕಣಜ.ಕಾಂ ಬೆಂಗಳೂರು
BENGALURU: ರಾಜ್ಯದ ಮಾರುಕಟ್ಟೆಯಲ್ಲಿ ಚಿನ್ನ(gold)ದ ಬೆಲೆ ಮತ್ತೆ ಏರಿಕೆ ಕಂಡಿದೆ. ಕಳೆದ ನಾಲ್ಕು ದಿನಗಳಿಂದ ನಿರಂತರ ಏರಿಕೆ ಕಾಣುತ್ತಿದ್ದ ಹಳದಿ ಲೋಹ ಶುಕ್ರವಾರ ಹೆಚ್ಚಳವಾಗಿದೆ.
ನವೆಂಬರ್ 19ರಿಂದ 23ರವರೆಗೆ ಚಿನ್ನದ ಬೆಲೆ ಇಳಿಕೆಯಾಗಿದ್ದು, ನ.24ರಿಂದ ಮತ್ತೆ ಏರುಗತಿಯಲ್ಲಿ ಸಾಗಿದೆ. ಗುರುವಾರ ಪ್ರತಿ 10 ಗ್ರಾಂ 24 ಕ್ಯಾರಟ್ ಚಿನ್ನಕ್ಕೆ 320 ರೂ. ಹೆಚ್ಚಳವಾದರೆ, ಶುಕ್ರವಾರ ಬೆಲೆ ಸ್ಥಿರವಾಗಿದೆ.
READ | ಗ್ರಾಹಕರಿಗೆ ಶಾಕ್, ಇಂದಿನಿಂದ ಹಾಲು, ಮೊಸರಿನ ದರ ಹೆಚ್ಚಳ, ಕಾರಣವೇನು?, ಕಳೆದ ಸಲ ಯಾವಾಗ ಏರಿಕೆಯಾಗಿತ್ತು ಬೆಲೆ?
ಚಿನ್ನದ ಬೆಲೆ (ಪ್ರತಿ 10 ಗ್ರಾಂ) | ||
ದಿನಾಂಕ | 22 ಕ್ಯಾರಟ್ | 24 ಕ್ಯಾರಟ್ |
ನವೆಂಬರ್ 19 | 48,650 | 53,070 |
ನವೆಂಬರ್ 20 | 48,650 | 53,070 |
ನವೆಂಬರ್ 21 | 48,550 | 52,970 |
ನವೆಂಬರ್ 22 | 48,350 | 52,750 |
ನವೆಂಬರ್ 23 | 48,300 | 52,700 |
ನವೆಂಬರ್ 24 | 48,600 | 53,020 |
ನವೆಂಬರ್ 25 | 48,600 | 53,020 |
ಬೆಳ್ಳಿ ಬೆಲೆಯಲ್ಲಿ ಇಳಿಕೆ
ಚಿನ್ನಕ್ಕೆ ತದ್ವಿರುದ್ಧವಾಗಿ ಬೆಳ್ಳಿ(silver)ಯ ಬೆಲೆಯು ಇಳಿಕೆಯಾಗಿದೆ. ಕಳೆದ ಒಂದು ವಾರದಲ್ಲಿ ಬೆಲೆಯಲ್ಲಿ ಏರಿಳಿತಗಳಾಗಿವೆ. ನ.22ರಿಂದ 24ರವರೆಗೆ ಬೆಲೆಯಲ್ಲಿ ಏರಿಕೆ ಕಂಡುಬಂದರೆ, 25ರಂದು ಪ್ರತಿ ಕೆಜಿಗೆ 200 ರೂ. ಇಳಿಕೆಯಾಗಿದೆ.
ಬೆಳ್ಳಿಯ ಬೆಲೆ (ಪ್ರತಿ 1 ಕೆಜಿಗೆ) | |
ದಿನಾಂಕ | ಕೆಜಿ |
ನವೆಂಬರ್ 19 | 67,500 |
ನವೆಂಬರ್ 20 | 67,500 |
ನವೆಂಬರ್ 21 | 66,500 |
ನವೆಂಬರ್ 22 | 67,000 |
ನವೆಂಬರ್ 23 | 67,500 |
ನವೆಂಬರ್ 24 | 68,200 |
ನವೆಂಬರ್ 25 | 68,000 |