Money seized | ಅರಕೆರೆ ಚೆಕ್ ಪೋಸ್ಟ್ ನಲ್ಲಿ ಕೋಟಿಗಟ್ಟಲೇ ಹಣ ಸೀಜ್, ವಾಹನದಲ್ಲಿತ್ತು ಕಂತೆ -ಕಂತೆ ಹಣದ ರಾಶಿ

currency

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ದಾಖಲೆಗಳಿಲ್ಲದೇ ವಾಹನದಲ್ಲಿ ಸಾಗಿಸುತ್ತಿದ್ದ 1.40 ಕೋಟಿ ನಗದನ್ನು ತುಂಗಾನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

READ | ತೀರ್ಥಹಳ್ಳಿಯಲ್ಲಿ ಕಾಡಾನೆಯನ್ನು ಸೆರೆಹಿಡಿದ್ದಿದ್ದೇ ಒಂದು ರೋಚಕ ಕಥೆ, 8-9 ದಿನಗಳ ಕಾರ್ಯಾಚರಣೆ ಹೇಗಿತ್ತು?

ನಗರ ಹೊರ ವಲಯದ ಅರಕೆರೆ ಚೆಕ್ ಪೋಸ್ಟ್’ನಲ್ಲಿ ಅನುಮಾನದ ಆಧಾರದ ಮೇಲೆ ವಾಹನವನ್ನು ತಡೆದು ಪರಿಶೀಲಿಸಿದಾಗ ಕಂತೆ- ಕಂತೆ ಹಣ ಇರುವುದು ಕಂಡುಬಂದಿದೆ. ವಾಹನವನ್ನು ಸಂಪೂರ್ಣವಾಗಿ ಮಾಡಿಫೈ ಮಾಡಿದ್ದು, ಅದರಲ್ಲಿ ಹಣ ಸಾಗಿಸಲಾಗುತ್ತಿತ್ತು‌. ವಾಹನವು ಶಿವಮೊಗ್ಗ ನಗರಕ್ಕೆ ಆಗಮಿಸುತ್ತಿತ್ತು. ಜಿಲ್ಲೆಯಲ್ಲಿ ಇದುವರೆಗೆ ಪತ್ತೆಯಾದ ಅತ್ಯಧಿಕ‌ ಹಣ ಇದಾಗಿದೆ.
ಪೊಲೀಸರ ಹದ್ದಿನ ಕಣ್ಣು
ಪೊಲೀಸರು ನಗರ ಹೊರ ವಲಯದಲ್ಲಿ ಸ್ಥಾಪಿಸಿರುವ ಚೆಕ್ ಪೋಸ್ಟ್ ಗಳಲ್ಲಿ ಪೊಲೀಸರು ಹದ್ದಿನ‌ ಕಣ್ಣಿದ್ದು, ‌ಹಗಲು ರಾತ್ರಿ ವಾಹನಗಳನ್ನು ಪರಿಶೀಲಿಸಿ ಬಿಡಲಾಗುತ್ತಿದೆ. ಪರಿಣಾಮ ಜಿಲ್ಲೆಯ ಶಿವಮೊಗ್ಗ ತಾಲೂಕಿನ ಗಾಜನೂರಿನಲ್ಲಿ ಮೊನ್ನೆ ₹4 ಲಕ್ಷ ಹಾಗೂ ನಿನ್ನೆ ತೀರ್ಥಹಳ್ಳಿಯಲ್ಲಿ ₹4 ಲಕ್ಷ ಪತ್ತೆಯಾಗಿದೆ. ಅಲ್ಲದೇ ಮದ್ಯ, ಮಾದಕ ವಸ್ತುಗಳು ಹಾಗೂ ಇನ್ನಿತರ ಉಪಕರಣಗಳು ಸಿಕ್ಕಿವೆ.

Assembly election | ಎರಡೇ ದಿನಗಳಲ್ಲಿ 8 ಲಕ್ಷ ನಗದು ಸೇರಿ 1.27 ಕೋಟಿ ಮೌಲ್ಯದ ಸಾಮಗ್ರಿ ಸೀಜ್

error: Content is protected !!