
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕೆಳದಿ ಶಿವಪ್ಪ ನಾಯಕ (Keladi shivappa nayaka) ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ನವುಲೆಯಲ್ಲಿ ಆಯೋಜಿಸಿರುವ ಕೃಷಿ ಮೇಳಕ್ಕೊಮ್ಮೆ ನೀವು ಕುಟುಂಬ ಸಮೇತ ಭೇಟಿ ನೀಡಲೇಬೇಕು. ಹೀಗಂತ ಭೇಟಿ ನೀಡಿದ ಜನರೇ ಹೇಳುತ್ತಿದ್ದಾರೆ.
READ | ಹೋಟೆಲ್’ನಲ್ಲಿ ಲೇಡಿಸ್ ನೈಟ್ ಪಾರ್ಟಿ, ಬಜರಂಗ ದಳ ಕಾರ್ಯಕರ್ತರ ದಾಳಿ, ಏನೇನಾಯ್ತು?
ಕೃಷಿ ಮೇಳದ ವಿಶೇಷಗಳಿವು
- ವಿಶಾಲವಾದ ಆವರಣದಲ್ಲಿ 400ಕ್ಕೂ ಹೆಚ್ಚು ಮಳಿಗೆಗಳನ್ನು ಹಾಕಲಾಗಿದ್ದು, ಅಲ್ಲಿ ಕೀಟ ಜಗತ್ತನ್ನು ನೋಡಲು ಎರಡು ಕಣ್ಣುಗಳು ಸಾಲುವುದಿಲ್ಲ. ಸಾವಿರಾರು ಬಗೆಯ ಕೀಟಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.
- ಜೇನು ಸಾಕಾಣಿಕೆ, ಅದರಿಂದ ಲಾಭ ಪಡೆಯುವುದು ಹೇಗೆ? ಮನೆಯಲ್ಲೂ ಜೇನುಗಳನ್ನು ಸಾಕಬಹುದೇ? ಜೇನಿನಿಂದ ತಯಾರಿಸುವ ಉಪ ಉತ್ಪನ್ನಗಳ ಮಾಹಿತಿಯ ಖಜಾನೆಯೇ ಇಲ್ಲಿದೆ.
- ಮತ್ಸ್ಯಗಳೂ ಸೇರಿದಂತೆ ಜಲವಾಸಿ ಪ್ರಾಣಿಗಳನ್ನು ಪ್ರದರ್ಶನಕ್ಕೆ ಇಡಲಾಗಿದ್ದು, ಅವುಗಳ ಬಗ್ಗೆ ಸಾಕಾಣಿಕೆ, ವಿಶೇಷತೆಯ ಕುರಿತೂ ಮಾಹಿತಿ ನೀಡಲಾಗುತ್ತಿದೆ.
- ಅಡಿಕೆ ಕೃಷಿಯನ್ನು ಇನ್ನಷ್ಟು ಲಾಭದಾಯಕ ಮಾಡುವುದಕ್ಕೆ ಯಾವ ಮಾರ್ಗೋಪಾಯಗಳನ್ನು ಅನುಸರಿಸಬೇಕು? ರೋಗ ಬಾಧೆಗಳಿಗೆ ಇರುವ ಪರಿಹಾರಗಳೇನು? ಇತ್ಯಾದಿ ಮಾಹಿತಿ ಪಡೆಯಬಹುದು.
- ಹೊಸ ಉಪಕರಣಗಳನ್ನು ಬಳಸಿ ಕೃಷಿಯನ್ನು ಮಾಡುವ ಕುರಿತು ಮಾಹಿತಿ ಒದಗಿಸಲು ವಿವಿಧ ಕಂಪನಿಗಳ ಮಳಿಗೆಗಳನ್ನು ತೆರೆಯಲಾಗಿದೆ. ಸರ್ಕಾರದ ಇಲಾಖೆಗಳೂ ಇಲ್ಲಿವೆ.
- ಮಕ್ಕಳಿಗೆ ಇಷ್ಟವಾಗಬಹುದಾದ ಕೀಟ ಮತ್ತು ಮೀನುಗಳ ಜಗತ್ತೇ ಇಲ್ಲಿದೆ. ವಿಜ್ಞಾನ ವಿದ್ಯಾರ್ಥಿಗಳಿಗಂತೂ ಅಧ್ಯಯನ ಸಾಮಗ್ರಿಗಳಿಗೆ ಕೊರತೆ ಇಲ್ಲ.
- ಮಹಿಳಾ ಸ್ವ ಸಹಾಯ ಸಂಘಗಳು ತಾವು ತಯಾರಿಸುವ ಉತ್ಪನ್ನಗಳನ್ನು ಮಾರಾಟಕ್ಕೆ ಇಟ್ಟಿದ್ದು, ಅದನ್ನು ಸಹ ಖರೀದಿಸಹುದಾಗಿದೆ.
- ಖಾದ್ಯ ಪದಾರ್ಥಗಳು, ಆಹಾರ ಮಳಿಗೆಗಳಿವೆ. ಖಾದಿ ಬಟ್ಟೆಗಳು ಸಹ ಮಾರಾಟಕ್ಕೆ ಲಭ್ಯ ಇವೆ.
Shivamogga ZP | ರಾಜ್ಯದಲ್ಲಿ 2ನೇ ಸ್ಥಾನ ಪಡೆದ ಶಿವಮೊಗ್ಗ ಜಿಲ್ಲಾ ಪಂಚಾಯಿತಿ, ಕಾರಣವೇನು?