Attack | ಸೋಮಿನಕೊಪ್ಪದಲ್ಲಿ ದುಷ್ಕರ್ಮಿಗಳಿಂದ ಆಟೋ ಗಾಜು ಪೀಸ್ ಪೀಸ್, ಏನು ಕಾರಣ?

Auto

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಸೋಮಿನಕೊಪ್ಪದಲ್ಲಿ ಆಟೋವೊಂದರ ಮೇಲೆ ದಾಳಿ ಮಾಡಿ ಗಾಜನ್ನು ಪುಡಿ ಪುಡಿ ಮಾಡಿರುವ ಘಟನೆ ನಡೆದಿದೆ.

READ | ಎಸ್.ಎನ್.ಚನ್ನಬಸಪ್ಪ ಬಗ್ಗೆ ತಿಳಿದುಕೊಳ್ಳಲೇಬೇಕಾದ ನಾಲ್ಕು ಅಂಶಗಳಿವು

ಆಟೋ ಚಾಲಕ ಹರೀಶ್ ರಾವ್ ಎಂಬುವವರ ಆಟೋದ ಮೇಲೆ ಹಲ್ಲೆ ಮಾಡಲಾಗಿದೆ. ರಕ್ಷಣೆ ನೀಡುವಂತೆ ನಗರದ ಜಿಲ್ಲಾ ರಕ್ಷಣಾಧಿಕಾರಿ ಕಚೇರಿಯ ಆವರಣದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಕಾಲಿಗೆ ಬಿದ್ದು ರಕ್ಷಣೆಗೆ ಮನವಿ ಮಾಡಿದ್ದಾರೆ.
ಸೋಮಿನಕೊಪ್ಪದಲ್ಲಿ ಆಟೋ ಚಲಾಯಿಸಿಕೊಂಡು ಬರುತ್ತಿದ್ದಾಗ ಮೂವರು ದುಷ್ಕರ್ಮಿಗಳು ಈತನನ್ನು ತಡೆದಿದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಯಾರಿಗೆ ಮತದಾನ ಮಾಡಿದ್ದಿಯಾ? ಎಂದು ಪ್ರಶ್ನಿಸಿದ್ದಾರೆ. ಆಟೋ ಚಾಲಕ ಹರೀಶ್ ರಾವ್ “ಬಿಜೆಪಿಗೆ ಮತ ಚಲಾಯಿಸಿರುವುದಾಗಿ ಹೇಳಿದ್ದಾರೆ” ಎಂದು ತಿಳಿದುಬಂದಿದೆ. ಆಗ ಆಟೋ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಹೇಳಲಾಗಿದೆ.

Accident | ಆಯನೂರಿನಲ್ಲಿ ಅಪಘಾತ, ಸ್ಥಳದಲ್ಲೇ ಪ್ರಾಣಬಿಟ್ಟ ಯುವಕ

error: Content is protected !!