ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನೈರುತ್ಯ ರೈಲ್ವೆ ಇಲಾಖೆಯು ಪ್ರಮುಖ ಪ್ರಕಟಣೆಯನ್ನು ಹೊರಡಿಸಿದ್ದು, ಅದರನ್ವಯ 15 ರೈಲ್ವೆಗಳ ಸಂಚಾರದ ಸಮಯದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಅದರಲ್ಲಿ ಶಿವಮೊಗ್ಗದ ಮೂರು ರೈಲುಗಳಿವೆ.
READ | ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ, ಇಂದು ಎಷ್ಟಿದೆ ರೇಟ್?
ಶಿವಮೊಗ್ಗ ಟೌನ್- ಯಶವಂತಪುರ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 16580, ಮೈಸೂರು- ಶಿವಮೊಗ್ಗ ಟೌನ್ (ರೈಲು ಸಂಖ್ಯೆ 16225), ತಾಳಗುಪ್ಪ- ಮೈಸೂರು ಎಕ್ಸ್ ಪ್ರೆಸ್ (ರೈಲು ಸಂಖ್ಯೆ 16228) ರೈಲುಗಳ ಸಂಚಾರ ಸಮಯವು ಜೂ.28ರಿಂದ ಬದಲಾಗಲಿದೆ.
ಶಿವಮೊಗ್ಗ ಟೌನ್- ಯಶವಂತಪುರ (ರೈಲು ಸಂಖ್ಯೆ 16580): ಈ ರೈಲು ಮಧ್ಯಾಹ್ನ 3.30ಕ್ಕೆ ಹೊರಡುತ್ತಿತ್ತು. ಆದರೆ, ಜೂ.28ರಿಂದ 3.45ಕ್ಕೆ ಹೊರಡಲಿದೆ. 3.48ಕ್ಕೆ ಭದ್ರಾವತಿಗೆ ಬರುತ್ತಿದ್ದ ರೈಲು 3.50ಕ್ಕೆ ತಲುಪಿ ಸಂಜೆ 4.03ರ ಬದಲು 4.05ಕ್ಕೆ ಹೊರಡಲಿದೆ. ರಾತ್ರಿ 8.30ಕ್ಕೆ ಯಶವಂತಪುರ ತಲುಪಲಿದೆ.
Click Here For Train Details