ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ(ಜಿಟಿಟಿಸಿ) ಶಿವಮೊಗ್ಗ ಕೇಂದ್ರದಲ್ಲಿ 2023-24 ನೇ ಸಾಲಿನ ಡಿಪ್ಲೊಮಾ ಇನ್ ಟೂಲ್ & ಡೈ ಮೇಕಿಂಗ್ ಕೋರ್ಸಿಗೆ ಪಿಯುಸಿ(ವಿಜ್ಞಾನ) ಹಾಗೂ ಐಟಿಐ (ಫಿಟ್ಟರ್, ಟರ್ನರ್ & ಮಷಿನಿಸ್ಟ್) ಪಾಸಾದ ವಿದ್ಯಾರ್ಥಿಗಳಿಗೆ ಲ್ಯಾಟರಲ್ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಆಗಸ್ಟ್ 8 ಕಡೆಯ ದಿನವಾಗಿದೆ. ಈ ಕೋರ್ಸ್ ಶೇ.100 ಉದ್ಯೋಗಾವಕಾಶವನ್ನು ಹೊಂದಿದ್ದು, ಈ ಕೋರ್ಸ್ ಮುಗಿಸಿದ ಕೂಡಲೇ ಉದ್ಯೋಗ ದೊರಕುತ್ತದೆ ಹಾಗೂ ವ್ಯಾಸಂಗಕ್ಕೆ ಸಹಕಾರಿಯಾಗಿದೆ.
READ | ಶಿವಮೊಗ್ಗದಲ್ಲಿ ವಾಡಿಕೆಯಷ್ಟು ಆಗಿಲ್ಲ ಮಳೆ, ಯಾವ ತಾಲೂಕಿನಲ್ಲಿ ಎಷ್ಟು ವರ್ಷಧಾರೆ?ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟು?
ಸುಸಜ್ಜಿತವಾದ ಬಾಲಕರ ವಸತಿ ನಿಲಯ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಘಟಕದ ಮುಖ್ಯಸ್ಥರು ಹಾಗೂ ಪ್ರಾಂಶುಪಾಲರು, ಜಿಟಿಟಿಸಿ, ಪ್ಲಾಟ್ ನಂ ಸಿಎ-38, ನಿದಿಗೆ ಕೈಗಾರಿಕಾ ಪ್ರದೇಶ, ಮಾಚೇನಹಳ್ಳಿ, ಶಿವಮಗ್ಗ ಮೊ.ಸಂ: 9448307027, 9880141054, 9902232839, 9449286543 ನ್ನು ಸಂಪರ್ಕಿಸಬಹುದೆಂದು ಜಿಟಿಟಿಸಿ ಪ್ರಾಂಶುಪಾಲರು ತಿಳಿಸಿದ್ದಾರೆ.
Milk, Curd price | ಇಂದಿನಿಂದ ಹಾಲು, ಮೊಸರು ಸೇರಿ ನಂದಿನ ಉತ್ಪನ್ನಗಳ ದರ ಏರಿಕೆ, ಯಾವುದರ ಬೆಲೆ ಎಷ್ಟು ಹೆಚ್ಚಳ?