ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಬುಧವಾರ ತಮ್ಮ ಪತ್ನಿ ಗೀತಾ ಪರ ಲೋಕಸಭೆ ಚುನಾವಣೆ ಪ್ರಚಾರಕ್ಕೆ ಬಂದಿದ್ದರು. ಬಿಸಿಲಿನ ಪ್ರಖರತೆಯಿಂದಾಗಿ ರೋಡ್ ಶೋ ಮತ್ತು ಕಾರ್ಯಕ್ರಮದುದ್ದಕ್ಕೂ ತಂಪು ನೀರು ಮತ್ತು ಕೂಲ್ ಡ್ರಿಂಕ್ಸ್ ಮೊರೆ ಹೋದರು.
READ | ಶಿವಮೊಗ್ಗಕ್ಕೆ ಕಾಂಗ್ರೆಸ್ ಅಭ್ಯರ್ಥಿ ಎಂಟ್ರಿ, ಸುಡು ಬಿಸಿಲಿನಲ್ಲೂ ಹ್ಯಾಟ್ರಿಕ್ ಹಿರೋ ರೋಡ್ ಶೋ
ಗೀತಾ ಶಿವರಾಜ್ ಕುಮಾರ್ ಅವರಿಗೆ ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿಕೆಟ್ ನೀಡಲಾಗಿದೆ. ಬುಧವಾರ ಶಿವಮೊಗ್ಗಕ್ಕೆ ಎಂಟ್ರಿ ಕೊಟ್ಟ ಗೀತಾ ಮತ್ತು ಶಿವರಾಜ್ ಕುಮಾರ್ ಅವರು ಕಾರ್ಯಕರ್ತರ ಅದ್ಧೂರಿ ಸನ್ಮಾನ ಸ್ವೀಕರಿಸಿದರು. ಭದ್ರಾವತಿಯ ವಿವಿಧೆಡೆ ತೆರೆದ ಜೀಪ್ ನಲ್ಲೇ ರೋಡ್ ಶೋ ಮಾಡಿದರು. ಭದ್ರಾವತಿಯ ಹೋಟೆಲ್ ನಲ್ಲಿ ಉಪಹಾರ ಸ್ವೀಕರಿಸಿದರು.