Elephant capture | ತೀರ್ಥಹಳ್ಳಿಯಲ್ಲಿ ಕಾಡಾನೆಯನ್ನು ಸೆರೆಹಿಡಿದ್ದಿದ್ದೇ ಒಂದು ರೋಚಕ ಕಥೆ, 8-9 ದಿನಗಳ ಕಾರ್ಯಾಚರಣೆ ಹೇಗಿತ್ತು?

thirthahalli elephant

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದ ಬಳಿ ಕಾಣಿಸಿಕೊಂಡಿದ್ದ ಕಾಡಾನೆಯನ್ನು ಸಕ್ರೆಬೈಲು ಆನೆಬಿಡಾರದ ಸಾಕಾನೆಗಳ ತಂಡವು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ.
ಕಳೆದ 8-9 ದಿನಗಳಿಂದ ನಿರಂತರವಾಗಿ ನಡೆದಿದ್ದ ಆನೆ ಹಿಡಿಯುವ ಕಾರ್ಯಾಚರಣೆ ಕೊನೆಗೂ ಶುಕ್ರವಾರ ಮುಕ್ತಾಯಗೊಂಡಿದೆ.

READ | ಚಂದ್ರಗುತ್ತಿ ದೇವಸ್ಥಾನದ ಹುಂಡಿ ಎಣಿಕೆ, ಎರಡು ತಿಂಗಳಲ್ಲಿ ದಾಖಲೆಯ ಹಣ ಸಂಗ್ರಹ

ಕಣ್ಣಿಗೆ ಕಂಡು ಕ್ಷಣಾರ್ಧದಲ್ಲೇ ಎಸ್ಕೇಪ್
ಸುಮಾರು 10-12 ವರ್ಷದ ಗಂಡು ಕಾಡಾನೆ ಕಾರ್ಯಾಚರಣೆಗೆ ಬಂದಿದ್ದ ತಂಡದ ಕಣ್ಣಿಗೆ ಕಂಡು ಕ್ಷಣಾರ್ಧದಲ್ಲೇ ಕಣ್ಮರೆಯಾಗುತ್ತಿತ್ತು. ಪರಿಣಾಮ, ಅದಕ್ಕೆ ಡಾರ್ಟ್ ಮಾಡಲು ಸಾಧ್ಯವೇ ಆಗುತ್ತಿರಲಿಲ್ಲ. ಕೊನೆಗೆ ಸಾಕಾನೆಗಳನ್ನು ಕಟ್ಟಿ ಹಾಕಿ ಆ ಗುಂಪಿನ ಬಳಿ ಆನೆ ಬಂದಾಗ ಅದಕ್ಕೆ ಡಾರ್ಟ್ ಮಾಡಿ ಸೆರೆಹಿಡಿಯಲಾಗಿದೆ.
ಕುರುವಳ್ಳಿ- ವಿಠಲನಗರದಿಂದ ದೇವಂಗಿ ಅಂಕಿನಕಟ್ಟೆವರೆಗಿನ ಸುಮಾರು 600 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ಈ ಕಾಡಾನೆ ಬೀಡು ಬಿಟ್ಟಿತ್ತು. ಹೇಗಾದರೂ ಮಾಡಿ ಅದನ್ನು ಹಿಡಿಯಬೇಕೆಂದು ಪ್ರಯತ್ನಿಸುತ್ತಿದ್ದರೂ ಸಾಧ್ಯವಾಗಲಿಲ್ಲ.
ಗುಡ್ಡಗಾಡು ಪ್ರದೇಶವೇ ಚಾಲೆಂಜ್
ಕಾಡಾನೆ ಕಾಣಿಸಿಕೊಳ್ಳುತ್ತಿದ್ದ ಪ್ರದೇಶವು ಗುಡ್ಡಗಾಡುಗಳಿಂದ ಕೂಡಿದ್ದು, ಗುಂಡಿಗಳೂ ಇದ್ದವು. ಹೀಗಾಗಿ, ಈ ಮಿಷನ್ ಅಷ್ಟೇನೂ ಸುಲಭದ್ದಾಗಿರಲಿಲ್ಲ. ಅನುಭವಿ ಸಾಗರನ ನೇತೃತ್ವದ ಗಜಪಡೆಯು ಅಲ್ಲಿಯೇ ಬೀಡುಬಿಟ್ಟು ಆನೆಯನ್ನು ಹಿಡಿಯುವುದಕ್ಕೆ ಪ್ರಯತ್ನಿಸುತ್ತಲೇ ಇತ್ತು. ಆದರೆ, ಸಾಧ್ಯವಾಗಿರಲಿಲ್ಲ. ಭಾನುಮತಿಯ ಮೂಲಕ ಹನಿಟ್ರ್ಯಾಪ್ ಮಾಡುವುದಕ್ಕೂ ಯೋಜನೆ ರೂಪಿಸಲಾಗಿತ್ತು. ಅದಕ್ಕೂ ಕಾಡಾನೆ ಡೋಂಟ್ ಕೇರ್ ಎನ್ನುತ್ತಿತ್ತು. ಮಚಾನ್ ನಲ್ಲಿ ಹಗಲು ರಾತ್ರಿ ಕಾಯ್ದು ಕುಳಿತು ಕಾಡಾನೆಯನ್ನು ಸೆರೆಹಿಡಿಯಲಾಗಿದೆ.
ತಜ್ಞರ ತಂಡದಿಂದ ಕಾರ್ಯಾಚರಣೆ
ಕಾಡಾನೆ ಹಿಡಿಯುವುದಕ್ಕೆ ಸಕ್ರೆಬೈಲಿನ ಸಾಗರ, ಬಾಲಣ್ಣ, ಬಹಾದ್ದೂರ್ ಮತ್ತು ಭಾನುಮತಿ ಆನೆಗಳನ್ನು ಬಳಸಿ ಕಾರ್ಯಾಚರಣೆ ಮಾಡಲಾಗಿದೆ. ವೈದ್ಯರಾದ ಡಾ.ವಿನಯ್, ಮುಜೀದ್, ಮುರುಳಿಧರ್, ವಾಸೀಂ ಅವರನ್ನು ಒಳಗೊಂಡ ಸುಮಾರು 80ಕ್ಕೂ ಸಿಬ್ಬಂದಿಯ ತಂಡವು ಬೀಡು ಬಿಟ್ಟು ಆನೆಯನ್ನು ಸೆರೆಹಿಡಿಯುವಲ್ಲಿ ಸಫಲವಾಗಿದೆ.

READ | ಎಷ್ಟು ಹಣ ಕೊಂಡೊಯ್ಯಬಹುದು, ಮದುವೆ ಅನುಮತಿ ಬೇಕಾ? ಪಕ್ಷವಷ್ಟೇ ಅಲ್ಲ ಜನರಿಗೂ ಕಂಡಿಷನ್ಸ್

ಗುರುವಾರ ರಾತ್ರಿ ಕಾಡಾನೆಯು ಭಾನುಮತಿಯ ಬಳಿ ಬಂದು ನಿಂತಿತ್ತು. ಆಗ ಡಾರ್ಟ್ ಮಾಡಲಾಗಿದೆ. ಸುಮಾರು 40 ನಿಮಿಷಗಳ ಬಳಿಕ ಆನೆ ಸೆಡೇಷನ್‍ಗೆ ಹೋಗಿತ್ತು. ತಕ್ಷಣ ಕಾಡಾನೆಗೆ ಹಗ್ಗ ಬಿಗಿಯಲಾಗಿದೆ. ಬೆಳಗ್ಗೆ ಕ್ರೇನ್ ಬಳಿ ಲಾರಿಗೆ ಆನೆಯನ್ನು ಸ್ಥಳಾಂತರಿಸಲಾಗಿದೆ. ಕಾರ್ಯಾಚರಣೆಯ ಬಳಿಕ ಸಕ್ರೆಬೈಲು ಕ್ಯಾಂಪಿನ ಆನೆಗಳು ವಾಪಸ್ ಆಗಿವೆ. ಕಾಡಾನೆಯನ್ನು ಅಭಯಾರಣ್ಯಕ್ಕೆ ಕಳುಹಿಸಲಾಗಿದೆ.

1 ತಿಂಗಳಲ್ಲಿ 2 ಕಾಡಾನೆ ಸಾವು, ತ್ಯಾಗದಬಾಗಿ ಅರಣ್ಯದಲ್ಲಿ ಮೃತಪಟ್ಟ ಆನೆ ದಂತದ ತೂಕ ಬರೋಬ್ಬರಿ 41 ಕೆಜಿ

error: Content is protected !!