ಸುದ್ದಿ ಕಣಜ.ಕಾಂ
ಶಿವಮೊಗ್ಗ: ಆರಂಭದಿಂದಲೂ ಶಿವಮೊಗ್ಗ, ಭದ್ರಾವತಿಯಲ್ಲಿ ಕೊರೊನಾ ಸೋಂಕು ಅಧಿಕ ಪ್ರಮಾಣದಲ್ಲಿ ದಾಖಲಾಗುತ್ತಿದೆ. ಸೋಂಕು ಇಳಿಮುಖಗೊಳ್ಳುತ್ತಿರುವ ಕಾಲದಲ್ಲೂ ಈ ಎರಡು ತಾಲೂಕುಗಳ ಹೊರತು ಬೇರೆಡೆ ಪಾಸಿಟಿವ್ ಸಂಖ್ಯೆ ಒಂದಂಕಿಗೆ ಇಳಿದಿದೆ.
https://www.suddikanaja.com/2020/12/11/covid-in-shivamogga/
ಶುಕ್ರವಾರ ಜಿಲ್ಲಾಡಳಿತ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಜಿಲ್ಲೆಯಲ್ಲಿ 133 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. 237 ಜನ ಗುಣಮುಖರಾಗಿದ್ದು, ಮೂವರು ಮೃತಪಟ್ಟಿದ್ದಾರೆ.
ತಾಲೂಕುವಾರು ವರದಿ | ಶಿವಮೊಗ್ಗ 54, ಭದ್ರಾವತಿ 36, ತೀರ್ಥಹಳ್ಳಿ 15, ಶಿಕಾರಿಪುರ 2, ಸಾಗರ 4, ಹೊಸನಗರ 8, ಸೊರಬ 7, ಬಾಹ್ಯ ಜಿಲ್ಲೆಯ 7 ಜನರಲ್ಲಿ ಸೋಂಕು ಪತ್ತೆಯಾಗಿದೆ.
ಸೋಂಕಿತರ ಸಂಪರ್ಕದಲ್ಲಿದ್ದ ಹಾಗೂ ರೋಗದ ಲಕ್ಷಣಗಳನ್ನು ಹೊಂದಿರುವ 5,443 ಜನರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಲಾಗಿದೆ. 2,466 ವರದಿಗಳು ನೆಗೆಟಿವ್ ಇರುವುದು ದೃಢಪಟ್ಟಿದೆ.
ಮೆಗ್ಗಾನ್ ಆಸ್ಪತ್ರೆಯಲ್ಲಿ 221, ಡಿಸಿಎಚ್ಸಿನಲ್ಲಿ 119, ಕೋವಿಡ್ ಕೇರ್ ಸೆಂಟರ್ನಲ್ಲಿ 435, ಖಾಸಗಿ ಆಸ್ಪತ್ರೆಯಲ್ಲಿ 248, ಹೋಮ್ ಐಸೋಲೇಷನ್ ನಲ್ಲಿ 352, ಟ್ರಿಯೇಜ್ ನಲ್ಲಿ 252 ಜನರಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,627 ಇದೆ.
https://www.suddikanaja.com/2020/12/15/covid-active-cases-decline-to-double-digit-in-shivamogga/