ಸುದ್ದಿ ಕಣಜ.ಕಾಂ | DISTRICT | LMD
ಶಿವಮೊಗ್ಗ: ಜಿಲ್ಲೆಯಲ್ಲಿ 2022ರ ಏಪ್ರಿಲ್’ರಿಂದ ಜೂನ್ ರವರೆಗೆ ಕಾನೂನು ಮಾಪನಶಾಸ್ತ್ರ ಇಲಾಖೆ(Department Of Legal Metrology-LMD)ಯಿಂದ ಸಾಧಿಸಲಾದ ಪ್ರಗತಿಯ ವಿವರವನ್ನು ಇಲಾಖೆಯ ಸಹಾಯಕ ನಿಯಂತ್ರಕರು ಈ ಕೆಳಗಿನಂತೆ ನೀಡಿದ್ದಾರೆ.
READ | 7 ದಿನ ಪೊಲೀಸ್ ಕಸ್ಟಡಿಯಲ್ಲಿರಲಿದ್ದಾರೆ ಹಂದಿ ಅಣ್ಣಿ ಕೊಲೆ ಆರೋಪಿಗಳು
₹5,65,800 ದಂಡ, 269 ಕೇಸ್
ತೂಕ, ಅಳತೆ ಸಾಧನಗಳ ಸತ್ಯಾಪನೆ, ಮುದ್ರೆಯಿಂದ ₹40,56,305 ಶುಲ್ಕ ಸಂಗ್ರಹಿಸಲಾಗಿದೆ. 546 ವ್ಯಾಪಾರಸ್ಥರು ಮತ್ತು ಕೈಗಾರಿಕೆಗಳನ್ನು ತಪಾಸಣೆ ಮಾಡಿದ್ದು, ತಪ್ಪಿತಸ್ಥರ ಮೇಲೆ 269 ಮೊಕದ್ದಮೆಗಳನ್ನು ಹೂಡಲಾಗಿದೆ. 248 ಪ್ರಕರಣಗಳನ್ನು ರಾಜಿ ಅಭಿಸಂಧಾನ ಮಾಡಿ ₹5,65,800 ದಂಡ ವಿಧಿಸಲಾಗಿದೆ ಎಂದು ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಎಸ್.ಮಂಜುನಾಥ ತಿಳಿಸಿದ್ದಾರೆ.