
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಇಲ್ಲಿ ಫಲ ಮತ್ತು ಪುಷ್ಪದಲ್ಲಿ ಅರಳಿದ ಕಲಾಕೃತಿಯನ್ನು ವೀಕ್ಷಿಸುವುದಕ್ಕೆ ಎಲ್ಲರೂ ಕುಟುಂಬದೊಂದಿಗೆ ಭೇಟಿ ನೀಡಲೇಬೇಕು. ವಿವಿಧ ಹೂವುಗಳಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ(shimoga airport), ಪುನೀತ್ ರಾಜಕುಮಾರ್(Punith rajkumar), ವನ್ಯಜೀವಿಗಳು, ಸ್ಮಾರ್ಟ್ ಸಿಟಿ (smart city) ಅರಳಿದೆ. ಇದನ್ನು ವೀಕ್ಷಿಸಲು ನೂರಾರು ಜನ ಆಗಮಿಸಿದ್ದು ವಿಶೇಷವಾಗಿತ್ತು.
READ | ಎರಡು ದಿನ ಶಿವಮೊಗ್ಗದ ಹಲವೆಡೆ ಕರೆಂಟ್ ಇರಲ್ಲ, ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಏನೇನು ವಿಶೇಷ?
ಆಗಸದೆತ್ತ ಚಿಮ್ಮಲು ರೆಡಿಯಾದ ವಿಮಾನ, ಸೆಲ್ಫಿ ಪಾಯಿಂಟ್ ನಿರ್ಮಿಸಲಾಗಿದೆ. ಅಲ್ಲಿ ಫೋಟೊ ತೆಗೆಸಿಕೊಳ್ಳುವುದಕ್ಕೆ ಜನ ಮುಗಿಬಿದ್ದಿದ್ದರು. ತೋಟಗಾರಿಕೆ ಇಲಾಖೆ, ಜಿಲ್ಲಾ ಉದ್ಯಾನ ಕಲಾ ಸಂಘ ಮತ್ತು ಕೃಷಿ ಸಂಬಂಧಿತ ಅಭಿವೃದ್ಧಿ ಇಲಾಖೆಗಳ ಸಹಯೋಗದಲ್ಲಿ ಗಣರಾಜ್ಯೋತ್ಸವ ಅಂಗವಾಗಿ ನಗರದ ತೋಟಗಾರಿಕೆ ಇಲಾಖೆ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ಭವನದ ಆವರಣದಲ್ಲಿ 4 ದಿನಗಳ ಕಾಲ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ.
ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ
ಮಹಿಳೆಯರಿಗಾಗಿ ಹೂವಿನ ರಂಗೋಲಿ ಸ್ಪರ್ಧೆ(ವಿವಿಧ ಸಸ್ಯ ಭಾಗಗಳನ್ನು, ಹೂ, ಮೊಗ್ಗು, ಎಲೆ, ಹಣ್ಣು, ಬೀಜ, ಧಾನ್ಯಗಳನ್ನು ಬಳಸಿ ರಂಗೋಲಿ ರಚನೆ), ಮನೆ, ಶಾಲೆ, ಅಂಗನವಾಡಿ ಕಚೇರಿ, ಖಾಸಗಿ ಸಂಸ್ಥೆಗಳಿಗೆ ಕೈತೋಟ, ತಾರಸಿ ತೋಟ ಮತ್ತು ಉದ್ಯಾನಗಳ ಸ್ಪರ್ಧೆ ಏರ್ಪಡಿಸಲಾಗಿದೆ.
ಜಿಲ್ಲೆಯ ಎಲ್ಲ ತಾಲೂಕುಗಳ ರೈತರು ಬೆಳೆದ ವಿಶೇಷ ರೀತಿಯ ಹೂ, ಹಣ್ಣು, ತರಕಾರಿ ಮತ್ತಿತರ ತೋಟಗಾರಿಕೆ ಉತ್ಪನಗಳನ್ನು ಪ್ರದರ್ಶಿಸಲಾಯಿತು.ವಿವಿಧ ತಳಿಯ ಅಡಿಕೆಗಳು, ಅನಾನಸ್, ವಾಟರ್ ಆಪಲ್ ಸೇರಿದಂತೆ ವಿವಿಧ ಹಣ್ಣುಗಳ ಪ್ರದರ್ಶನ ನಡೆಯಿತು.
ಫಲಪುಷ್ಪ ಪ್ರದರ್ಶನದಲ್ಲಿ 80 ಮಳಿಗೆಗಳು
ಕೃಷಿ, ಪಶುಪಾಲನಾ, ರೇಷ್ಮೆ , ಮೀನುಗಾರಿಕೆ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ, ಸ್ತ್ರೀಶಕ್ತಿ ಸಂಘಗಳು, ಕೃಷಿ ಮತ್ತು ತೋಟಗಾರಿಕೆ ಯಂತ್ರೋಪಕರಣಗಳು, ಹನಿ ನೀರಾವರಿ ಉಪಕರಣಗಳು, ಅಲಂಕಾರಿಕ ಹೂ ಗಿಡಗಳ ನರ್ಸರಿ ಇತ್ಯಾದಿ ಒಟ್ಟು ವಿವಿಧ ರೀತಿಯ 80 ಮಳಿಗೆಗಳು ಪ್ರದರ್ಶನದಲ್ಲಿವೆ.
ಅರಣ್ಯ ಇಲಾಖೆ ಮತ್ತು ಮೃಗಾಲಯ ಪ್ರಾಧಿಕಾರದ ಹುಲಿ ಮತ್ತು ಸಿಂಹಧಾಮದ ವತಿಯಿಂದ ವಿವಿಧ ವನ್ಯಜೀವಿ ಲೋಕದ ಪರಿಚಯ ಹಾಗೂ ವಿವಿಧ ಪ್ರಾತ್ಯಕ್ಷಿಕೆ ನಡೆಯಿತು. ವಿವಿಧ ಅಲಂಕಾರಿಕೆ ಹೂಗಳು, ಕುಬ್ಜಗಿಡಗಳು (ಬೋನ್ಸಾಯ್), ಅಣಬೆ ಪ್ರಾತ್ಯಕ್ಷತೆ ಹಾಗೂ ಜೇನು ಕೃಷಿ ಕುರಿತಾದ ಪ್ರಾತ್ಯಕ್ಷತೆ ಹಾಗೂ ಸುಮಾರು 5 ಸಾವಿರ ವಿವಿಧ ಜಾತಿಯ ಆಕರ್ಷಕ ಹೂ ಕುಂಡಗಳ ಪ್ರದರ್ಶನಕ್ಕೆ ಇಡಲಾಗಿತ್ತು.
READ | ಶಿವಮೊಗ್ಗ ವಿಮಾನ ನಿಲ್ದಾಣ ಎಂಟ್ರಿ ನಿಷೇಧ, ಕಾರಣವೇನು?
ಕಾರ್ಯಕ್ರಮಕ್ಕೆ ಚಾಲನೆ
ಫಲಪುಷ್ಪ ಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ.ನಾರಾಯಣಗೌಡ ಚಾಲನೆ ನೀಡಿದರು. ಪ್ರಾತ್ಯಕ್ಷಿಕೆಗಳ ಬಗ್ಗೆ ಮಾಹಿತಿ ಪಡೆದರು. ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಪ್ರಕಾಶ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಪ್ರಕಾಶ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.