ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಪ್ರತಿ ಚುನಾವಣೆಯಲ್ಲಿ ಆಯೋಗಕ್ಕೆ ತಲೆನೋವಾಗುವುದೇ ಯುವ ಮತದಾರರನ್ನು ಸೆಳೆಯುವುದು. ಅದರಲ್ಲೂ ಬೆಂಗಳೂರು ಕ್ಷೇತ್ರದಲ್ಲಿ ಯುವಪೀಳಿಗೆಯನ್ನು ಸೆಳೆಯುವುದು ಕಷ್ಟವಾಗುತ್ತಿದೆ. ಹೀಗಾಗಿ, ಈ ವಿಧಾನಸಭೆ ಚುನಾವಣೆಯಲ್ಲಿ ಆಯೋಗವು ಹಲವು ಯೋಜನೆಗಳನ್ನು ರೂಪಿಸಿದೆ.
READ | ಕರ್ನಾಟಕ ವಿಧಾನಸಭೆ ಚುನಾವಣೆಗೆ ಡೇಟ್ ಫಿಕ್ಸ್, ಯಾವಾಗ ನಡೆಯಲಿದೆ ಎಲೆಕ್ಷನ್? ಇಲ್ಲಿದೆ ವೇಳಾಪಟ್ಟಿ
2019ರ ಲೋಕಸಭೆ ಚುನಾವಣೆಯಲ್ಲಿ ಶೇ.20ರಷ್ಟು ಮತದಾನ ಇಳಿಮುಖವಾಗಿತ್ತು. ಅದರಲ್ಲಿ ಶೇ.9ರಷ್ಟು ನಗರ ಪ್ರದೇಶದ್ದೇ ಆಗಿದ್ದವು. ನಗರದ ಪ್ರದೇಶದ ಮತದಾರರು ಮತ್ತು ಯುವಪೀಳಿಗೆಯನ್ನು ಸೆಳೆಯಲು ಹ್ಯಾಕಥಾನ್- ಎಲೆಥಾನ್ ಅನ್ನು ಆರಂಭಿಸಲು ಆಯೋಗ ಮುಂದಾಗಿದೆ. ಇದಕ್ಕಾಗಿ 746ಕ್ಕೂ ಹೆಚ್ಚು ತಂಡಗಳು ಮತದಾರರ ಪಾಲ್ಗೊಳ್ಳುವಿಕೆ ಹೆಚ್ಚಿಸುವ ಕಾರ್ಯಕ್ಕೆ ನೋಂದಾಯಿಸಿಕೊಂಡಿವೆ.
- 5,24,11,557 ಮತದಾರರಿದ್ದು, 58,282 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಅವುಗಳಲ್ಲಿ 28,866 ಮತಗಟ್ಟೆಗಳು ನಗರ ಪ್ರದೇಶದಲ್ಲಿರಲಿವೆ. 1,300ಕ್ಕೂ ಹೆಚ್ಚು ಮತಗಟ್ಟೆಗಳನ್ನು ಮಹಿಳೆಯರೇ ನಿರ್ವಹಿಸಲಿದ್ದಾರೆ.
- ಮತದಾರರಿಗೆ ಮತಗಟ್ಟೆಗಳಲ್ಲಿ ಕನಿಷ್ಠ ಮೂಲಸೌಕರ್ಯಗಳನ್ನು ನೀಡಲಾಗುವುದು (ಎಎಂಎಫ್). ಮತಗಟ್ಟೆಗಳಲ್ಲಿ ಕಾಯಂ ಸೌಲಭ್ಯಗಳನ್ನು ನೀಡಲು ಒತ್ತು ನೀಡಲಾಗುತ್ತಿದೆ. ಲಿಂಗತ್ವ ಅಲ್ಪಸಂಖ್ಯಾತರಿಗೆ ವಿಶೇಷ ಒತ್ತು ನೀಡುವುದು.
- 80 ವರ್ಷ ದಾಟಿದ ವೃದ್ಧರಿಗೆ ಮತ್ತು ಅಂಗವಿಕಲರಿಗೆ ಮನೆಯಿಂದಲೇ ಮತ ಚಲಾಯಿಸುವ ಅವಕಾಶವನ್ನು ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಪರಿಚಯಿಸಲಾಗುತ್ತಿದೆ. 5.55 ಲಕ್ಷ ಮಂದಿ ಅಂಗವಿಕಲರಿದ್ದಾರೆ.