ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯಲ್ಲಿ 2022-23 ನೇ ಸಾಲಿನಲ್ಲಿ ಏಪ್ರಿಲ್ 2022 ರಿಂದ ಮಾರ್ಚ್ 2023ರವರೆಗೆ ಕಾನೂನು ಮಾಪನಶಾಸ್ತ್ರ ಇಲಾಖೆ (Department Of Legal Metrology- LMD) ಯಿಂದ ಸಾಧಿಸಲಾದ ಪ್ರಗತಿಯ ವಿವರವನ್ನು ಇಲಾಖೆಯ ಸಹಾಯಕ ನಿಯಂತ್ರಕರು ಈ ಕೆಳಗಿನಂತೆ ನೀಡಿರುತ್ತಾರೆ.
READ | ಶಿವಮೊಗ್ಗ ಜಿಲ್ಲೆಯಾದ್ಯಂತ ಪೊಲೀಸರ ಭಾರೀ ದಾಳಿ, 11 ಮರಳು, 2 ಜಲ್ಲಿ ತುಂಬಿದ ವಾಹನಗಳು ಸೀಜ್
₹18.30 ಲಕ್ಷ ದಂಡ
ತೂಕ, ಅಳತೆ ಸಾಧನಗಳ ಸತ್ಯಾಪನೆ/ ಮುದ್ರೆಯಿಂದ ಸಂಗ್ರಹಿಸಿದ ಶುಲ್ಕ ₹1,74,06,734 ಆಗಿರುತ್ತದೆ. ತಪಾಸಣೆ ಮಾಡಿರುವ ವ್ಯಾಪಾರಸ್ಥರ ಮತ್ತು ಕೈಗಾರಿಕೆಗಳ ಸಂಖ್ಯೆ 2850. ತಪ್ಪಿತಸ್ಥರ ಮೇಲೆ ಹೂಡಿರುವ ಮೊಕದ್ದಮೆಗಳ ಸಂಖ್ಯೆ 952 ಆಗಿರುತ್ತದೆ. ರಾಜಿ ಅಭಿಸಂದಾನ ಮಾಡಿರುವ ಮೊಕದ್ದಮೆಗಳ ಸಂಖ್ಯೆ 952. ಮೊಕದ್ದಮೆಗಳನ್ನು ರಾಜಿ ಅಭಿಸಂಧಾನ ಮಾಡಿ ವಿಧಿಸಿದ ದಂಡ ₹18,30,300 ಆಗಿರುತ್ತದೆ ಎಂದು ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯ ನಿಯಂತ್ರಕ ಎಸ್.ಮಂಜುನಾಥ್ ತಿಳಿಸಿದ್ದಾರೆ.
CEIR Portal | ಶಿವಮೊಗ್ಗದ 3 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ₹16.60 ಲಕ್ಷ ಮೌಲ್ಯದ ಮೊಬೈಲ್’ಗಳು ಸೀಜ್!