
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (Shimoga Institute of Medical Sciences)ಯು ಗುತ್ತಿಗೆ ಆಧಾರದ ಮೇಲೆ ಸಂಚಿತ ವೇತನದಡಿಯಲ್ಲಿ ತುರ್ತು ಚಿಕಿತ್ಸಾ ವೈದ್ಯಾಧಿಕಾರಿಗಳ 5 ಹುದ್ದೆಗಳಿಗೆ ಎಂಬಿಬಿಎಸ್ ಮಾಡಿರುವ ಅಭ್ಯರ್ಥಿಗಳಿಂದ ಆರ್ಜಿ ಆಹ್ವಾನಿಸಿದೆ.
- ನೇಮಕಾತಿ ಸಂಸ್ಥೆ- ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಸಿಮ್ಸ್)
- ಹುದ್ದೆ ಹೆಸರು- ತುರ್ತು ಚಿಕಿತ್ಸಾ ವೈದ್ಯಾಧಿಕಾರಿಗಳು
ಹುದ್ದೆಗಳ ಸಂಖ್ಯೆ- 5 - ವೆಬ್‍ಸೈಟ್- https://sims.karnataka.gov.in
ಅರ್ಜಿ ನಮೂನೆ ಹಾಗೂ ಹೆಚ್ಚಿನ ವಿವರಗಳಿಗೆ ಸಂಸ್ಥೆಯ ವೆಬ್‍ಸೈಟ್ https://sims.karnataka.gov.in ಅನ್ನು ಸಂಪರ್ಕಿಸುವುದು. ಅರ್ಜಿದಾರರು ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಮೇ 29 ರೊಳಗಾಗಿ ನಿರ್ದೇಶಕರು ಮತ್ತು ಡೀನ್ ಶಿವಮೊಗ್ಗ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಸಾಗರ ರಸ್ತೆ, ಶಿವಮೊಗ್ಗ ಈ ವಿಳಾಸಕ್ಕೆ ಸಲ್ಲಿಸುವಂತೆ ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
READ | ಮೈಸೂರು ನ್ಯಾಯಾಲಯದಲ್ಲಿ 45 ಹುದ್ದೆಗಳು ಖಾಲಿ, ಯಾರೆಲ್ಲ ಅರ್ಜಿ ಸಲ್ಲಿಸಲು ಅವಕಾಶ?
ಈ ಹುದ್ದೆಯು ಸಂಪೂರ್ಣವಾಗಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುವುದು. ಯಾವುದೇ ಕಾರಣಕ್ಕೂ ಖ
ಕಾಯಂ ನೇಮಕಾತಿಯೆಂದು ಪರಿಗಣಿಸುವುದಿಲ್ಲ ಹಾಗೂ ಸರ್ಕಾರಿ ನೌಕರರಿಗೆ ಅನ್ವಯವಾಗುವ ಪಿಂಚಣಿ/ ಜಿ.ಪಿ.ಎಫ್/ ಪಿ.ಎಫ್. ಇತರೆ ವಿಶೇಷ ರಜೆ ಸೌಲಭ್ಯಗಳು ಅನ್ವಯವಾಗುವುದಿಲ್ಲ.
ಸುದ್ದಿ ಕಣಜ ವರದಿಗೆ ಸ್ಪಂದನೆ: ಪಾಪ ನಾಯ್ಕ್ ಕುಟುಂಬಕ್ಕೆ ಸಿಕ್ತು 3 ಲಕ್ಷ ರೂ. ಪರಿಹಾರ