ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ತೆಲಂಗಾಣದ ವಾರಂಗಲ್ ನಲ್ಲಿ ಅ.15ರಿಂದ 17 ರವರೆಗೆ ನಡೆಯುವ 34ನೇ ಸೌತ್ ಜೋನ್ ನ್ಯಾಷನಲ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಶಿವಮೊಗ್ಗದ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.
READ | ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿವಿಧ ಹುದ್ದೆಗಳು ಖಾಲಿ, ಭರ್ತಿಗೆ ಅರ್ಜಿ ಆಹ್ವಾನ
ಜಿಲ್ಲಾ ಕ್ರೀಡಾಶಾಲೆಯ ಕ್ರೀಡಾಪಟುಗಳಾದ ಕೆ.ಜೆ.ಸಿರಿ(ಟ್ರೈಯಾಥ್ಲಾನ್), ಎಂ.ವಿ.ಅಮೂಲ್ಯ(3ಕೆ.ವಾಕ್), ಗೌತಮಿಗೌಡ (ಹೈಜಂಪ್), ಕೆ.ಜೆಶರತ್ (ಕಿಡ್ಸ್ ಜಾವಲಿನ್), ಎಸ್.ಎಚ್.ಸಂಜಯ್ (60 ಮೀ), ಜಿ.ನಿತಿನಸಿಂಗ್ (ಲಾಂಗ್ ಜಂಪ್) ಹಾಗೂ ಸುದೀಪ್ (ಹೈಜಂಪ್) ಕ್ರೀಡೆಗಳಲ್ಲಿ ಭಾಗವಹಿಸಲಿದ್ದಾರೆ.
ಈ ಎಲ್ಲ ಕ್ರೀಡಾಪಟುಗಳು ತರಬೇತುದಾರರಾದ ಬಾಳಪ್ಪ ಮಾನೆ ಎಂಬುವವರ ಬಳಿ ದೈನಂದಿನ ತರಬೇತಿಯನ್ನು ಪಡೆಯುತ್ತಿದ್ದಾರೆ. ಈ ಕ್ರೀಡಾಪಟುಗಳಿಗೆ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥಸ್ವಾಮಿ ಮತ್ತು ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.