ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಇಬ್ಬರು ವಿದ್ಯಾರ್ಥಿನಿಯರು ಕಾಲೇಜು ಕಟ್ಟಡದಿಂದ ಕೆಳಗೆ ಜಿಗಿದ ಎರಡು ಪ್ರತ್ಯೇಕ ಘಟನೆಗಳು ನಗರದಲ್ಲಿ ಮಂಗಳವಾರ ನಡೆದಿವೆ. ಅದರಲ್ಲಿ ಒಬ್ಬ ವಿದ್ಯಾರ್ಥಿನಿ ಮೃತಪಟ್ಟಿದ್ದು, ಮತ್ತೊಬ್ಬಳ ಸ್ಥಿತಿ ಚಿಂತಾಜನಕವಾಗಿದೆ.
READ |ಸಕ್ರೆಬೈಲು ಆನೆಬಿಡಾರದಲ್ಲಿ ಆನೆ ಮೇಲಿಂದ ಕೆಳಗೆ ಬಿದ್ದ ಮಾವುತ, ಕಾರಣವೇನು?
ಘಟನೆ 1: ಕಟ್ಟಡದಿಂದ ಹಾರಿದ ವಿದ್ಯಾರ್ಥಿನಿ ಸಾವು
ಪ್ರತಿಷ್ಠಿತ ಪಿಯು ಕಾಲೇಜಿನ ವಿದ್ಯಾರ್ಥಿನಿ ಮೇಘಶ್ರೀ (17) ಅವರು ಕಾಲೇಜು ಕಟ್ಟಡದಿಂದ ಬಿದ್ದು ಮೃತಪಟ್ಟಿದ್ದಾರೆ. ಚನ್ನಗಿರಿ ತಾಲೂಕಿನ ಚನ್ನಾಪುರ ಮೂಲದವರಾದ ಇವರು ದ್ವಿತೀಯ ಪಿಯುಸಿ ಓದುತ್ತಿದ್ದರು.
ವಿದ್ಯಾರ್ಥಿನಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದರಿಂದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಷ್ಟೊತ್ತಿಗೆ ಅವರು ಮೃತಪಟ್ಟಿದ್ದರು. ಪುತ್ರಿಯ ಸಾವಿನ ವಿಚಾರ ಪಾಲಕರಿಗೆ ಗೊತ್ತಾಗಿದ್ದೇ ಕುಟುಂಬದೊಂದಿಗೆ ಕಾಲೇಜಿನ ಮುಂದೆ ಪ್ರತಿಭಟನೆ ನಡೆಸಿದರು. ಇದಕ್ಕೆ ಹೋರಾಟಗಾರರು ಸಾಥ್ ನೀಡಿದರು. ಆದರೆ, ಪೊಲೀಸರು ಯಾರಿಗೂ ಕಾಲೇಜು ಆವರಣಕ್ಕೆ ಬಿಡಲಿಲ್ಲ. ಇದರಿಂದ ಆಕ್ರೋಶ ಭುಗಿಲೆದ್ದಿತ್ತು. ಸಂಜೆಯವರೆಗೂ ಪ್ರತಿಭಟನೆ ಮುಂದುವರಿದಿತ್ತು. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ 2: ಗಂಭೀರ ಗಾಯಗೊಂಡ ವಿದ್ಯಾರ್ಥಿನಿ
ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸಾಗರ ರಸ್ತೆಯಲ್ಲಿರುವ ಪ್ರತಿಷ್ಠಿತ ಕಾಲೇಜುವೊಂದರಲ್ಲಿ ಬಿಎಸ್.ಸಿ ಮೊದಲನೇ ವರ್ಷದಲ್ಲಿದ್ದ ರಚನಾ(19) ಎಂಬುವವರು ಕಾಲೇಜು ಕಟ್ಟಡದಿಂದ ಕೆಳಗೆ ಹಾರಿದ್ದಾರೆ. ಇದಕ್ಕೆ ಖಚಿತ ಕಾರಣ ತಿಳಿದುಬಂದಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಯ ಬಗ್ಗೆ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
Arecanut shell | ಅಡಿಕೆ ಬೆಳೆಗಾರರಿಗೆ ಶುಭಸುದ್ದಿ, ಶಬ್ದ ನಿರೋಧಕವಾಗಿಯೂ ಅಡಿಕೆ ಸಿಪ್ಪೆ ಬಳಕೆ!