ಶಿವಮೊಗ್ಗದಲ್ಲಿ ಯೋಗ ತರಬೇತುದಾರರ ನೇರ ಸಂದರ್ಶನ, ಎಷ್ಟು ಹುದ್ದೆಗಳ ನೇಮಕಾತಿ?

ಸುದ್ದಿ ಕಣಜ.ಕಾಂ | DISTRICT | JOB JUNCTION
ಶಿವಮೊಗ್ಗ: ಕೇಂದ್ರ ಪುರಸ್ಕೃತ ಯೋಜನೆಯಾದ ಆಯುಷ್ಮಾನ್ ಭಾರತ್ ಯೋಜನೆಯಡಿ ಹೆಲ್ತ್ ಆ್ಯಂಡ್ ವೆಲ್‍ನೆಸ್ ಸೆಂಟರ್‌ ಗಳನ್ನಾಗಿ ಮೇಲ್ದರ್ಜೆಗೇರಿಸಲಾದ ಶಿವಮೊಗ್ಗ ಜಿಲ್ಲೆಯಲ್ಲಿನ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಪುರಪ್ಪೆಮನೆ ಹೊಸನಗರ ತಾಲ್ಲೂಕು ಇಲ್ಲಿಗೆ ಮಹಿಳೆ-1 ಮತ್ತು ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಸಾಲೂರು ಇಲ್ಲಿಗೆ ಪುರುಷ-1 ಒಟ್ಟು 2 ಯೋಗ ತರಬೇತಿದಾರರ (ಪಾರ್ಟ್ ಟೈಮ್) ಸೇವೆಯನ್ನು 11 ತಿಂಗಳ ಅವಧಿಗೆ ಪಡೆಯುವ ಸಂಬಂಧ ಮೇ 11 ರಂದು ಜಿಲ್ಲಾ ಆಯುಷ್ ಕಚೇರಿ ಶಿವಮೊಗ್ಗ ಇಲ್ಲಿ ನೇರ ಸಂದರ್ಶನವನ್ನು ಏರ್ಪಡಿಸಲಾಗಿದೆ.

READ | ಹಟ್ಟಿ ಗೋಲ್ಡ್ ಮೈನ್ಸ್ ನಲ್ಲಿ ಉದ್ಯೋಗ, ನೇರ ನೇಮಕಾತಿ

ವಿದ್ಯಾರ್ಹತೆ, ವಯೋಮಿತಿ ಮತ್ತು ಗೌರವಧನ ಮತ್ತು ಇತರೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆಯುಷ್ ಕಚೇರಿಯನ್ನು ಸಂಪರ್ಕಿಸಬಹುದೆಂದು ಜಿಲ್ಲಾ ಆಯುಷ್ ಅಧಿಕಾರಿ ತಿಳಿಸಿದ್ದಾರೆ.