ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯಲ್ಲಿ ಶುಕ್ರವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ(SSLC Exam)ಗಳು ಆರಂಭಗೊಂಡಿದ್ದು, ಮೊದಲ ದಿನ ಕನ್ನಡ (kannada) ಭಾಷಾ ಪರೀಕ್ಷೆಗೆ 227 ವಿದ್ಯಾರ್ಥಿಗಳು ಗೈರು (absent) ಹಾಜರಾಗಿದ್ದಾರೆ.
21,643 ವಿದ್ಯಾರ್ಥಿಗಳು (students) ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಅದರಲ್ಲಿ 21,416 ಹಾಜರಾಗಿದ್ದಾರೆ. ಇದರಲ್ಲಿ 21,146 ಹೊಸಬರು ಹಾಗೂ 270 ಪುನರಾವರ್ತಿತ ವಿದ್ಯಾರ್ಥಿಗಳಿದ್ದಾರೆ.
READ | ಅರಕೆರೆ ಚೆಕ್ ಪೋಸ್ಟ್ ನಲ್ಲಿ ಕೋಟಿಗಟ್ಟಲೇ ಹಣ ಸೀಜ್, ವಾಹನದಲ್ಲಿತ್ತು ಕಂತೆ -ಕಂತೆ ಹಣದ ರಾಶಿ
ಯಾವ ತಾಲೂಕಿನಲ್ಲಿ ಎಷ್ಟು ವಿದ್ಯಾರ್ಥಿಗಳು ಹಾಜರು?
ಭದ್ರಾವತಿಯಲ್ಲಿ 4116 (ಗೈರು-83), ಹೊಸನಗರದಲ್ಲಿ 1502 (6), ಸಾಗರ 2784 (6), ಶಿಕಾರಿಪುರದಲ್ಲಿ 2876 (13), ಶಿವಮೊಗ್ಗದಲ್ಲಿ 6134 (81), ಸೊರಬದಲ್ಲಿ 2362 (29) ಮತ್ತು ತೀರ್ಥಹಳ್ಳಿಯಲ್ಲಿ 1642 (9) ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.
94 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪರೀಕ್ಷೆ
ಮಾರ್ಚ್ 31ರಿಂದ ಏಪ್ರಿಲ್ 15ರ ವರೆಗೆ ಜಿಲ್ಲೆಯ ಒಟ್ಟು 94 ಪರೀಕ್ಷಾ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆದಿವೆ. ಅದರಲ್ಲಿ 2 ಖಾಸಗಿ ಪರೀಕ್ಷಾ ಕೇಂದ್ರಗಳಿವೆ.
ಪರೀಕ್ಷೆಗಳು ಸುಸೂತ್ರವಾಗಿ ನಡೆಸುವ ಉದ್ದೇಶದಿಂದ 94 ಸ್ಥಾನಿಕ ಜಾಗೃತ ದಳದ ಅಧಿಕಾರಿಗಳು, 94 ಮುಖ್ಯ ಅಧೀಕ್ಷಕರು, 31 ಅನ್ಯ ಇಲಾಖಾ ಅಧಿಕಾರಿಗಳನ್ನು ವೀಕ್ಷಕರಾಗಿ ಕಾರ್ಯನಿರ್ವಹಿಸಿದರು. ಜಿಲ್ಲೆಯಲ್ಲಿ 33 ಮಾರ್ಗಗಳನ್ನು ರಚಿಸಲಾಗಿತ್ತು. 33 ಜನ ಮಾರ್ಗಾಧಿಕಾರಿಗಳು ಕಾರ್ಯನಿರ್ವಹಿಸಿದರು. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀ. ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.
TOP 14 News | ಶಿವಮೊಗ್ಗದ ಇಂದಿನ ಬಿಸಿ ಬಿಸಿ ಸುದ್ದಿಗಳೇನು? ಕ್ಲಿಕ್ ಮಾಡಿ ಓದಿ