Arrest | ಭದ್ರಾವತಿ, ಶಿವಮೊಗ್ಗದಲ್ಲಿ ಪೊಲೀಸ್ ಕಾರ್ಯಾಚರಣೆ, ಮೂವರ ಬಂಧನ, ಕಾರಣವೇನು?

Kote police station

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಭದ್ರಾವತಿ(Bhadravathi)ಯ ಹೊಸಮನೆ ಠಾಣೆ (Hosamane police station) ಮತ್ತು ಶಿವಮೊಗ್ಗದ ಕೋಟೆ ಠಾಣೆ (Kote police station) ವ್ಯಾಪ್ತಿಯಲ್ಲಿ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದು, ಮೂವರನ್ನು ಬಂಧಿಸಲಾಗಿದೆ.

READ | ಲಕ್ಷ್ಮೀ ಟಾಕೀಸ್ ಬಂದ್, 4 ದಶಕ ಮನೋರಂಜನೆ ನೀಡಿದ ಥಿಯೇಟರ್ ನೆನಪು ಮಾತ್ರ, ಮೊದಲು ಪ್ರದರ್ಶನಗೊಂಡ ಚಿತ್ರ ಯಾವುದು?

ಕೇಸ್ ನಂ.1
ಭದ್ರಾವತಿಯ ಕಣಕಟ್ಟೆ ಗೋಂಧಿ ಚಾನೆಲ್ ಏರಿಯ ಮೇಲೆ ಕೆಲವು ಜನರು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಭದ್ರಾವತಿ ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕ ಜಿತೇಂದ್ರ ಕುಮಾರ್ ದಯಾಮ ಮಾರ್ಗದರ್ಶನದಲ್ಲಿ ಪಿಎಸ್.ಐ ನಿಂಗಪ್ಪ ಕರಕಣ್ಣನವರ್ ನೇತೃತ್ವದಲ್ಲಿ ಸಿಬ್ಬಂದಿಯ ತಂಡ ದಾಳಿ ನಡೆಸಿ, ಗಾಂಜಾ ಮಾರಾಟ ಮಾಡುತ್ತಿದ್ದ ಭದ್ರಾವತಿಯ ಭೋವಿ ಕಾಲೋನಿಯ ಕಿರಣ ಕುಮಾರ್(23), ಭದ್ರಾ ಕಾಲೋನಿಯ ಮಂಜುನಾಥ್(27) ಎಂಬುವವರನ್ನು ಬಂಧಿಸಲಾಗಿದೆ. ಆರೋಪಿತರಿಂದ ಅಂದಾಜು ₹6,000 ಒಟ್ಟು 230 ಗ್ರಾಂ ತೂಕದ ಮಾದಕ ವಸ್ತು ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ.
ಕೇಸ್ ನಂ.2
ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ರಾಜೀವ್ ಗಾಂಧಿ ಬಡಾವಣೆಯ ತುಂಗಾ ತೋಟಗಾರಿಕಾ ಕ್ಷೇತ್ರದ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ವ್ಯಕ್ತಿಯು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಕೋಟೆ ಠಾಣೆ ಪಿಐ ಶಿವಪ್ರಸಾದ್ ರಾವ್ ಮತ್ತು ಸಿಬ್ಬಂದಿಯ ತಂಡವು ದಾಳಿ ನಡೆಸಿ ಅಣ್ಣಾನಗರದ ಅಫ್ರೋಜ್ ಅಲಿಯಾಸ್ ಅಪ್ಪು(35) ಎಂಬುವವರನ್ನು ಬಂಧಿಸಿದೆ. ಆರೋಪಿಯ ಬಳಿಯಿಂದ ಅಂದಾಜು ₹11,000 ಮೌಲ್ಯದ 551 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

Krushi mela | ಶಿವಮೊಗ್ಗದಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೊಮ್ಮೆ ನೀವು ಬರಲೇಬೇಕು, ಇಲ್ಲಿನ 8 ವಿಶೇಷಗಳೇನು?

error: Content is protected !!