ಸುದ್ದಿ ಕಣಜ.ಕಾಂ
ಶಿವಮೊಗ್ಗ: ಎರಡನೇ ಅಲೆಯಲ್ಲಿ ಇದೇ ಮೊದಲ ಸಲ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ. ಭಾನುವಾರ ಒಂದೇ ದಿನ 12 ಮಂದಿಯನ್ನು ಕಾಯಿಲೆ ಬಲಿ ಪಡೆದಿದೆ.
ಸಕ್ರಿಯ ಸಂಖ್ಯೆಯಲ್ಲೂ ಏರಿಕೆ | ಸಕ್ರಿಯ ಪ್ರಕರಣಗಳ ಸಂಖ್ಯೆ 3170ಕ್ಕೆ ತಲುಪಿದೆ. ಮೆಗ್ಗಾನ್ ನಲ್ಲಿ 409, ಕೋವಿಡ್ ಕೇರ್ ಸೆಂಟರ್ನಲ್ಲಿ 54, ಖಾಸಗಿ ಆಸ್ಪತ್ರೆಯಲ್ಲಿ 300, ಹೋಮ್ ಐಸೋಲೇಷನ್ ನಲ್ಲಿ 2,325, ಟ್ರಿಯೇಜ್ ನಲ್ಲಿ 82 ಜನ ಸೋಂಕಿತರಿದ್ದಾರೆ.
765 ಪಾಸಿಟಿವ್ | ಭಾನುವಾರದಂದು 765 ಮಂದಿಯಲ್ಲಿ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ. ಇದರಲ್ಲಿ 32 ವಿದ್ಯಾರ್ಥಿಗಳು, 11 ಸಿಬ್ಬಂದಿ ಇದ್ದಾರೆ.
ತಾಲೂಕುವಾರು ವರದಿ | ಶಿವಮೊಗ್ಗ 179, ಭದ್ರಾವತಿ 128, ಶಿಕಾರಿಪುರ 74, ತೀರ್ಥಹಳ್ಳಿ 83, ಸೊರಬ 129, ಹೊಸನಗರ 65, ಬಾಹ್ಯ ಜಿಲ್ಲೆಯ 18 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.