ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕರ್ನಾಟಕ ಲೋಕಾಯುಕ್ತ (Karnataka lokayukta) ಪೊಲೀಸ್ ವಿಭಾಗದ ಜಿಲ್ಲಾ ಅಧಿಕಾರಿಗಳು ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಫೆಬ್ರವರಿಯಲ್ಲಿ ಕೆಳಕಂಡ ದಿನಗಳಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಾರ್ವಜನಿಕರ ಕುಂದು ಕೊರತೆ ಅರ್ಜಿ ಸ್ವೀಕಾರ ಸಭೆ ನಡೆಸುವರು.
READ | ಸಾಗರ ಮಾರಿಕಾಂಬ ಜಾತ್ರೆಯ ಧಾರ್ಮಿಕ ಪೂಜೆಗಳಿಗೆ ಚಾಲನೆ, ಏನೇನು ಕಾರ್ಯಕ್ರಮಗಳು ಜರುಗಿದವು?
ಯಾವ ದಿನ ಎಲ್ಲಿ ಅಹವಾಲು ಸ್ವೀಕಾರ?
ಫೆ.7 ರಂದು ಹೊಸನಗರ ತಾಲೂಕು ಕಚೇರಿ ಸಭಾಂಗಣ, ಫೆ.9 ರಂದು ಶಿಕಾರಿಪುರ ಕಚೇರಿ ಪಂಚಾಯಿತಿ ಸಭಾಂಗಣ, ಫೆ. 14 ರಂದು ಭದ್ರಾವತಿ ತಾಲೂಕು ಕಚೇರಿ ಸಭಾಂಗಣ, ಫೆ. 16 ರಂದು ತೀರ್ಥಹಳ್ಳಿ ತಾಲೂಕು ಕಚೇರಿ ಸಭಾಂಗಣ, ಫೆ.22 ರಂದು ಸಾಗರ ತಾಲೂಕು ಕಚೇರಿ ಸಭಾಂಗಣ ಹಾಗೂ ಫೆ.27 ರಂದು ಸೊರಬ ತಾಲೂಕು ಕಚೇರಿ ಸಭಾಂಗಣಗಳಲ್ಲಿ ಸಭೆ ನಡೆಯಲಿದೆ.
ಸರ್ಕಾರಿ ಕರ್ತವ್ಯ ನಿರ್ವಹಿಸಲು ಬೇಜವಾಬ್ದಾರಿತನ, ನಿರ್ಲಕ್ಷ್ಯ, ವಿಳಂಬ ಮತ್ತು ಅಧಿಕೃತ ಕೆಲಸಕ್ಕಾಗಿ ಲಂಚಕ್ಕೆ ಬೇಡಿಕೆ ಇಟ್ಟಂತಹ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ ಸಾರ್ವಜನಿಕರು ಲಿಖಿತ ಅಹವಾಲು ಸಲ್ಲಿಸುವಂತೆ ಶಿವಮೊಗ್ಗದ ಕರ್ನಾಟಕ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ತಿಳಿಸಿದ್ದಾರೆ.